Important
Trending

ಹೆಗಡೆಯ ದೇವಿ ನಾಯ್ಕ ನಿಧನ: ಲಯನ್ಸ್ ಕಣ್ಣಿನ ಆಸ್ಪತ್ರೆಗೆ ನೇತ್ರದಾನ

ಕುಮಟಾ: ತಾಲೂಕಿನ ಹೆಗಡೆಯ ದೊಡ್ಡ ಕೊಪ್ಪ ನಿವಾಸಿ ಶ್ರೀಮತಿ ದೇವಿ ಮಹಾದೇವ ನಾಯ್ಕ (88)ಅವರು ವಯೋಸಹಜದ ಕಾರಣ ಅಕ್ಟೋಬರ್ 18 ಶುಕ್ರವಾರದಂದು ನಿಧನರಾದರು. ಮೃತರು ಮೂವರು ಪುತ್ರಿಯರು,ನಾಲ್ವರು ಪುತ್ರರನ್ನು ಬಿಟ್ಟಗಲಿದ್ದು ಇವರೆಲ್ಲ ಸುಶಿಕ್ಷಿತ ಸುಸಂಸ್ಕೃತ ಕುಟುಂಬದವರಾಗಿರುತ್ತಾರೆ.

ಮೆಸೇಜ್ ಕಳುಹಿಸಿ ಮನೆ ಬಿಟ್ಟು ಹೋದ ಯುವಕ: ಆ ಸಂದೇಶದಲ್ಲಿ ಏನಿದೆ ನೋಡಿ?

ಕುಟುಂಬದವರ ನಿಶ್ಚಯದಂತೆ ಮೃತರ ನೇತ್ರಗಳನ್ನು ಕುಮಟಾದ ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ.ರಾಜಶೇಖರ ಅವರ ನೇತೃತ್ವದ ತಂಡವು ಮೃತರ ಮನೆಗೆ ಭೇಟಿ ನೀಡಿ ಸುರಕ್ಷಿತವಾಗಿ ದಾನ ಪಡೆದರು. ಆದರ್ಶ ಅನುಕರಣೀಯ ಕಾರ್ಯಕ್ಕಾಗಿ ಆಸ್ಪತ್ರೆಯ ಟ್ರಸ್ಟ್ ವತಿಯಿಂದ ಆಡಳಿತಾಧಿಕಾರಿ ಜಯದೇವ ಬಳಗಂಡಿ ಅವರು ಮೃತರ ಕುಟುಂಬದವರನ್ನು ಅಭಿನಂದಿಸಿ ಸಾಂತ್ವಾನ ತಿಳಿಸಿ,ಮೃತರ ಆತ್ಮಕ್ಕೆ ಸದ್ಗತಿ ಕೋರಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button