ಸಿದ್ದಾಪುರ: ತಾಲೂಕ ಸರಕಾರಿ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಸಾರ್ವಜನಿಕರು ಆಸ್ಪತ್ರೆ ಆವರಣ ಎದುರು ಸಾಮಾಜಿಕ ಹೋರಾಟಗಾರ ಅಣ್ಣಪ್ಪ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಆಸ್ಪತ್ರೆಯಲ್ಲಿನ ಮಕ್ಕಳ ತಜ್ಞರು, ಹೆರಿಗೆ ತಜ್ಞರು, ನರ್ಸ್ ಗಳ ನಿರ್ಲಕ್ಷದಿಂದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಂದ ಬಡ ರೋಗಿಗಳು ಸರಿಯಾದ ಚಿಕಿತ್ಸೆ ಸಿಗದೇ ಪ್ರಾಣವನ್ನ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಕ್ಕಳ ತಜ್ಞರು ಮಕ್ಕಳನ್ನ ಸರ್ಕಾರಿ ಆಸ್ಪತ್ರೆಯಲ್ಲಿ ನೋಡದೆ ತಮ್ಮ ಖಾಸಗಿ ಕ್ಲಿನಿಕ್ ಬರಲು ಹೇಳುತ್ತಾರೆ . ಖಾಸಗಿ ಕ್ಲಿನಿಕ್ ಗೆ ಬರಲಿ ಎಂದು ಇಲ್ಲಿ ಯಾವುದೇ ರೀತಿ ಚಿಕಿತ್ಸೆಯನ್ನು ನೀಡುವುದಿಲ್ಲ ಅದೇ ರೀತಿ ಹೆರಿಗೆ ತಜ್ಞರು ಕೂಡ ಡೆಲಿವರಿಗೆ ಬಂದAತವರಿಗೆ ನಾರ್ಮಲ್ ಗೆ ಇಷ್ಟು ಸೀಜರಿಯನ್ ಗೆ ಇಷ್ಟು ಎಂದು ದರ ನಿಗದಿ ಮಾಡಿ ಲಂಚ ಪಡೆಯುತ್ತಾರೆ ಇದರಿಂದ ಬಡವರು ರೋಸಿ ಹೋಗಿದ್ದಾರೆ ಎಂದು ಆರೋಪಿಸಿದರು.
ಇತ್ತೀಚಿಗೆ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷದಿಂದ ನಡೆದ ಬಾಣಂತಿಯ ಸಾವು ಕುಟುಂಬವನ್ನ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ ಮಕ್ಕಳು ತಬ್ಬಲಿಗಳಾಗಿದ್ದಾರೆ. ಕೂಡಲೇ ಇಂತಹ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸ್ಕ್ಯಾನಿಂಗ್ ಗೆ ಸಾಗರಕ್ಕೆ ಕಳುಹಿಸುತ್ತಾರೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಸ್ಕ್ಯಾನಿಂಗ್ ಮಷೀನ್ ಅಳವಡಿಸಬೇಕು ಎಂದು ಒತ್ತಾಯಿಸಿದರು. ಮನವಿ ಪಡೆದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪ್ರಕಾಶ್ ಪುರಾಣಿಕ ಮಾತನಾಡಿ ಒಂದು ವಾರದ ಒಳಗೆ ಆಸ್ಪತ್ರೆ ಸಿಬ್ಬಂದಿಗಳ ವ್ಯವಸ್ಥೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ಗ್ರೇಟು ತಹಸಿಲ್ದಾರ್ ಶಾಮ್ ಸುಂದರ್ ಮಾತನಾಡಿ ಆಸ್ಪತ್ರೆಗೆ ಬೇಕಾಗಿರುವ ಉಪಕರಣಗಳನ್ನು ಶಾಸಕರ ಸಭೆಯಲ್ಲಿ ಮಾತನಾಡಿ ತಿಳಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೃಷ್ಣಮೂರ್ತಿ ಐಸೂರ್, ದಯಾನಂದ ಕಡಕೇರಿ, ಸಂತೋಷ, ವೆಂಕಟೇಶ್ ನಾಯ್ಕ, ದೀಪಾ ನಾಯ್ಕ, ಶೋಭಾ ನಾಯ್ಕ,ದಿನೇಶ್ ಐಸುರ್,ಕೃಷ್ಣಮೂರ್ತಿ ನಿಡಗೋಡ,ವಿವೇಕ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ದಿವಾಕರ ಸಂಪoಡ ಸಿದ್ದಾಪುರ