Join Our

WhatsApp Group
Important
Trending

LIC ಏಜೆಂಟನ ಬೈಕಿಗೆ ಡಿಕ್ಕಿ ಪಡಿಸಿದ ನೊಂದಣಿ ಸಂಖ್ಯೆ ನಮೂದು ಇರದ ಆಟೋರಿಕ್ಷಾ: ಬೈಕ್ ಸವಾರ ಮತ್ತು ಪುಟ್ಟ ಮಗುವಿಗೆ ಗಾಯ

ಅಂಕೋಲಾ: ಬೈಕಿಗೆ ಆಟೋ ರಿಕ್ಷಾ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮತ್ತು ಅವರ ಐದು ವರ್ಷದ ಮಗ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಕೇಣಿಯಲ್ಲಿ ನಡೆದಿದೆ. ಬೆಲೇಕೇರಿ ನಿವಾಸಿ ಎಲ್.ಐ.ಸಿ ಏಜಂಟ್ ನಂದು ಕೇಶವ ನಾಯ್ಕ(49) ಮತ್ತು ಅವರ ಮಗ ನಿಹಾಲ್ (5) ಗಾಯಗೊಂಡವರಾಗಿದ್ದು ಇವರು ಕೆ.ಎ30 ಎಕ್ಸ್ 6075 ನೋಂದಣಿ ಸಂಖ್ಯೆಯ ಬೈಕ್ ಮೇಲೆ ಬೆಲೇಕೇರಿ ಕಡೆ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಆಟೋ ರಿಕ್ಷಾ ಚಾಲಕ ತನ್ನ ಇದುವರೆಗೆ ನೋಂದಣಿ ಸಂಖ್ಯೆ ನಮೂದು ಆಗದಿರುವ ಹೊಸ ಆಟೋ ರಿಕ್ಷಾವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಬೈಕಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆಟೋ ರಿಕ್ಷಾ ಚಾಲಕ ಹುಲಿದೇವರವಾಡದ ನಿವಾಸಿ ಅಯಾನ್ ರಿಯಾಜ ಅಹ್ಮದ್ (23) ಎಂಬಾತನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಗಾಯಗೊಂಡಿದ್ದ ಬೈಕ್ ಸವಾರನಿಗೆ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ,ಬಳಿಕ ಕಾರವಾರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಂದ ಸ್ಕ್ಯಾನಿಂಗ್ ಮತ್ತಿತತರ ಕಾರಣಗಳಿಗಾಗಿ ಪಕ್ಕದ ಜಿಲ್ಲೆಯ ಆಸ್ಪತ್ರೆಗೂ ಕರೆದೊಯ್ಯಲಾಗಿತ್ತು ಎನ್ನಲಾಗಿದ್ದು ಅದೃಷ್ಟ ವಶಾತ್ ಬೈಕ್ ಸವಾರ ಮತ್ತು ಪುಟಾಣಿ ಮಗು ಜೀವಪಾಯದಿಂದ ಪಾರಾಗಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ, ಅಂಕೋಲಾ

Back to top button