ಹೊನ್ನಾವರ: ಕದಂಬ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್ ಉತ್ತರ ಕನ್ನಡ ಇವರ ಸಹಯೋಗದಲ್ಲಿ ಶ್ರೀನಿಕೇತನ ಸ್ಕೂಲ್ ಇಸಳೂರ ಸಿರ್ಸಿಯಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತಾಲೂಕಿನ ಎಂ.ಪಿ.ಇ.ಸೊಸೈಟಿ ಸೆಂಟ್ರಲ್ ಸ್ಕೂಲಿನ 9 ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಗೆದ್ದು ವಿಶೇಷ ಸಾಧನೆಯನ್ನು ಮಾಡಿರುತ್ತಾರೆ.
ಶಾಲೆಯಿಂದ ಒಟ್ಟು 12 ವಿದ್ಯಾರ್ಥಿಗಳು ಭಾಗವಹಿಸಿದ್ದು ಅವರಲ್ಲಿ 9 ವಿದ್ಯಾರ್ಥಿಗಳು ಪ್ರಶಸ್ತಿಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಕುಮಾರಿ ಪ್ರಾರ್ಥನಾ ಆಚಾರ್ಯ ಭಾಷಣದಲ್ಲಿ ಪ್ರಥಮ, ಕುಮಾರಿ ಭುವಿ ರಾಘವೇಂದ್ರ ನಾಯ್ಕ ಏಕಪಾತ್ರಾಭಿನಯದಲ್ಲಿ ತೃತೀಯ, ಕು.ಆರುಷ್ ಗಣೇಶ ಭಟ್ಟ ಹಾಗೂ ಕು.ಅತ್ರೇಯ ಗಣೇಶ ಭಟ್ಟ ರಸಪ್ರಶ್ನೆಯಲ್ಲಿ ದ್ವಿತೀಯ, ಕು. ಶಾಂಭವಿ ಕೃಷ್ಣಮೂರ್ತಿ ಭಟ್ಟ
ಹಿಂದುಸ್ತಾನಿ ಸಂಗೀತದಲ್ಲಿ ದ್ವಿತೀಯ, ಹೈಸ್ಕೂಲ್ ವಿಭಾಗದಲ್ಲಿ ಕುಮಾರಿ ಸಹನಾ ಹೆಗಡೆ ಹಿಂದುಸ್ತಾನಿ ಸಂಗೀತದಲ್ಲಿ ಪ್ರಥಮ, ಕು.ಶ್ರೀನಿಧಿ ಮಹಾಭಲೇಶ್ವರ ನಾಯ್ಕ ಹಾಗೂ ಕು. ಜಾಹ್ನವಿ ವಿಜಯ ನಾಯ್ಕ ರಸಪ್ರಶ್ನೆಯಲ್ಲಿ ದ್ವಿತೀಯ ಸ್ಥಾನಗಳನ್ನು ಗಳಿಸುವ ಮೂಲಕ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.ಅವರಿಗೆ ಎಂ.ಪಿ.ಇ.ಸೊಸೈಟಿಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯರು, ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರು ಶುಭ ಹಾರೈಸಿದ್ದಾರೆ.
ವಿಸ್ಮಯ ನ್ಯೂಸ್, ಹೊನ್ನಾವರ