128 ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ : 37 ಕೇಸ್ ನಲ್ಲಿ ಜಾಮೀನು ರಹಿತ ವಾರೆಂಟ್: ಕೊನೆಗೂ ಕಿಲಾಡಿ ಕಳ್ಳನನ್ನು ಬಂಧಿಸಿದ ಪೊಲೀಸರು
ಕಾರವಾರ: ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸುಮಾರು 128 ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಅಂತರಾಜ್ಯ ಕಳ್ಳನನ್ನ ಕಾರವಾರ ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತಿಚೆಗೆ ಕಾರವಾರ ನಗರದ ಆಶ್ರಮರೋಡ್ ನಲ್ಲಿರುವ ಅಭಿಮಾನಶ್ರೀ ಎನ್ನುವ ಅಪಾರ್ಟಮೆಂಟಿನ ಪ್ಲಾಟ್‌ನಲ್ಲಿ ಹಗಲು ಕಳ್ಳತನವಾದ ಬಗ್ಗೆ ಪ್ಲಾಟಿನ ಮಾಲೀಕರು ದೂರನ್ನ ನೀಡಿದ್ದರು. ಇನ್ನು ಜನವಸತಿ ಇರುವ ಪ್ಲಾಟ್ ನಲ್ಲಿ ಕಳ್ಳತನವಾಗಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣವನ್ನ ಅತೀ ಗಂಭೀರ ಎಂದು ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್ ಆರೋಪಿಗಳನ್ನ ಪತ್ತೆ ಮಾಡಲು 3 ತಂಡಗಳನ್ನು ರಚಿಸಿದ್ದು ಕಾರ್ಯಾಚರಣೆಗೆ ಇಳಿದ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದವು.
ಇನ್ನು ಕಾರವಾರ ನಗರ ಠಾಣೆಯ ಇನ್ಸಪೆಕ್ಟರ್ ರಮೇಶ್ ಹೂಗಾರ್ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಲಾಗಿತ್ತು. ಪಂಜಾಬ್ ಜಲದಂರ್ ಮೂಲದ ಸುಮೀರ್ ಶರ್ಮಾ ಎನ್ನುವ ಆರೋಪಿಯನ್ನ ಸೀನಿಮಯ ರೀತಿಯಲ್ಲಿ ಬೆನ್ನುಹತ್ತಿ ಪಂಜಾಬ್‌ನ ಅಮೃತಸರ ಗೋಲ್ಡನ ಟೆಂಪಲ್ ಹತ್ತಿರ ಬಂಧಿಸಲಾಗಿದೆ. ಆರೋಪಿಯಿಂದ ಕಳವು ಮಾಡಿದ 34 ಗ್ರಾಂ. ಬಂಗಾರದ ಚಿನ್ನಾಭರಣಗಳನ್ನು ಹಾಗೂ 03 ಲಕ್ಷ ರೂಪಾಯಿ ನಗದು ಹಣ ಸೇರಿ ಒಟ್ಟು ಸುಮಾರು 5 ಲಕ್ಷದಷ್ಟು ಮಾಲನ್ನು ಜಪ್ತ ಪಡಲಾಗಿದೆ.
ವಿಸ್ಮಯ ನ್ಯೂಸ್, ಕಾರವಾರ