Important
Trending

ಮನೆಗೆ ಆಕಸ್ಮಿಕ ಬೆಂಕಿ ತೊಟ್ಟ ಬಟ್ಟೆ ಬಿಟ್ಟು ಎಲ್ಲವನ್ನೂ ಕಳೆದುಕೊಂಡ ಬಡ ಕುಟುಂಬಕ್ಕೆ ಬೇಕಿದೆ ತುರ್ತು ನೆರವು

ಅಂಕೋಲಾ: ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ , ಹೊತ್ತಿ ಉರಿದ ಪರಿಣಾಮ ಮನೆ ಹಾಗೂ ಮನೆಯಲ್ಲಿದ್ದ ಎಲ್ಲ ಸಾಮಾನುಗಳು ಸುಟ್ಟು ಕರಕಲಾಗಿ ಲಕ್ಷಾಂತರ ರೂ ಹಾನಿಯಾದ ಘಟನೆ ಹಟ್ಟಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಕಲಬೇಣದಲ್ಲಿ ಸಂಭವಿಸಿದೆ. ರಾಧಿಕಾ ಮತ್ತು ರಾಮದಾಸ್ ನಾಯ್ಕ ಇವರು ಬಡ ದಂಪತಿಗಳಾಗಿದ್ದು ,ಗಂಡ ಕೂಲಿ ನಾಲಿ ಮಾಡಿ ಸಂಸಾರದ ಜವಾಬ್ದಾರಿ ನಿಭಾಯಿಸುತ್ತಿದ್ದರು. ಬೆಳಿಗ್ಗೆ ಕೂಲಿ ಕೆಲಸಕ್ಕಾಗಿ ಹೊರ ಹೋಗಿದ್ದ ಗಂಡ ಮತ್ತು ಅದಾವುದೋ ಕಾರಣದಿಂದ ಹೆಂಡತಿಯೂ ಮನೆಯಿಂದ ಸ್ವಲ್ಪ ದೂರ ಹೋಗಿದ್ದಾಗ ,ಅವರ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಅಕ್ಕ ಪಕ್ಕದವರು ಮತ್ತು ಕುಟುಂಬ ಸಂಬAಧಿಗಳು ದೂರದಿಂದ ನೋಡಿ ,ಬೆಂಕಿ ಆರಿಸಲು ಓಡೋಡಿ ಬಂದಿದ್ದಾರೆ. ಆದರೆ ಆ ವೇಳೆಗಾಗಲೇ ಮನೆಯಲ್ಲಿದ್ದ ಬಟ್ಟೆ , ದವಸ ಧಾನ್ಯ ಮತ್ತಿತರ ವಸ್ತುಗಳಿಗೆ ಹಾಗೂ ಕಚ್ಚಾ ಮನೆಯ ಮಹಡಿ ಹಾಗೂ ಕಟ್ಟಿಗೆಗಳಿಗೆ ಬೆಂಕಿ ಹೊತ್ತಿ ಉರಿದಿದೆ.

ಸ್ಥಳೀಯರು ಬೆಂಕಿ ನಂದಿಸಲು ಅತೀವ ಪ್ರಯತ್ನ ಮಾಡಿದರಾದರೂ ,ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಗೋದ್ರೆಜ್ ಕಪಾಟ್ ,ಅದರಲ್ಲಿದ್ದ ಕೆಲ ಚಿನ್ನದ ಆಭರಣ , ಹೊಸ ಮನೆ ಕಟ್ಟಲು ಸಾಲ ಮತ್ತಿತರ ರೀತಿಯಲ್ಲಿ ಕೂಡಿಟ್ಟ ಹಣ , ಕೆಲ ದಾಖಲಾತಿ ಮತ್ತಿತರ ಕಾಗದ ಪತ್ರಗಳು ,ಬಟ್ಟೆ ಮತ್ತಿತರ ಬೆಲೆ ಬಾಳುವ ವಸ್ತುಗಳು , ಮನೆಯಲ್ಲಿದ್ದ ದಿನಸಿ ಸಮೇತ ಪಾತ್ರೆ ಪಗಡೆಗಳು , ಕಾಟ್ , ಮತ್ತಿತರ ಜೀವನ ವಶ್ಯಕ ವಸ್ತುಗಳೆಲ್ಲ ಬೆಂಕಿಗಾಹುತಿಯಾಗಿದೆ.,ಯಾವುದೇ ವಸ್ತುಗಳು ಉಪಯೋಗಕ್ಕೆ ಬಾರದಂತೆ ಸುಟ್ಟು ಕರಕಲಾಗಿದ್ದು ತಾವು ಮೈಗೆ ತೊಟ್ಟ ಬಟ್ಟೆ ಬಿಟ್ಟು ಎಲ್ಲವೂ ಬೆಂಕಿಗೆ ಆಹುತಿಯಾದ ಬಗ್ಗೆ ಮನೆಯ ಯಜಮಾನತಿ ನೊಂದು ತಮ್ಮಪರಿಸ್ಥಿತಿ ಬಗ್ಗೆ ಹೇಳಿಕೊಂಡಳು.

ಕಂದಾಯ ಇಲಾಖೆಯ ಸ್ಥಳೀಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಹಾನಿ ಅಂದಾಜು ಮತ್ತು ಬೆಂಕಿ ಅವಘಡದ ಕುರಿತಂತೆ ಹೆಚ್ಚಿನ ಮತ್ತು ನಿಖರ ಮಾಹಿತಿಗಳು ತಿಳಿದು ಬರಬೇಕಿದೆ. ಈ ಕುರಿತು ಪೊಲೀಸ್ ಇಲಾಖೆಗೂ ಮಾಹಿತಿ ನೀಡಲಾಗಿದ್ದು ಕಾನೂನು ಕ್ರಮ ಮುಂದುವರೆದಿದೆ.ಮನೆ ಮತ್ತು ಮನೆಯಲ್ಲಿದ್ದ ಎಲ್ಲ ಸಾಮಾನುಗಳನ್ನು ಕಳೆದುಕೊಂಡ ಬಡ ಕುಟುಂಬ ಭವಿಷ್ಯದ ಸೂರಿಗಾಗಿ ಚಿಂತಿಸುವAತಾ ಗಿದ್ದು ,ಬಡ ಕುಟುಂಬಕ್ಕೆ ಸರ್ಕಾರ ಶೀಘ್ರವಾಗಿ ಯೋಗ್ಯ ಪರಿಹಾರ ಬಿಡುಗಡೆಗೊಳಿಸಬೇಕಿದೆ ಮತ್ತು ಸಂಘ ಸಂಸ್ಥೆಗಳು , ದಾನಿಗಳು ಬಡ ಕುಟುಂಬಕ್ಕೆ ಜೀವನ ಅವಶ್ಯಕ ಸಾಮಗ್ರಿ , ಬಟ್ಟೆ ,ಸ್ವಂತ ಮನೆ ಕಟ್ಟಿಕೊಳ್ಳಲು ನೆರವು ನೀಡಿ ಸಾಂತ್ವನ ಹೇಳಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button