ಶಿರಸಿ: ಅಡಿಕೆ ವಕಾರಿಯ ಶೆಟರ್‌ಗೆ ಹಾಕಿದ ಬೀಗ ಮುರಿದು ಒಳ ನುಗ್ಗಿದ ಕಳ್ಳರು 4 ಲಕ್ಷ ರೂಪಾಯಿ ಮೌಲ್ಯದ ಚಾಲಿ ಅಡಿಕೆಯನ್ನು ಕಳ್ಳತನ ಮಾಡಿದ ಕುರಿತು ಶಿರಸಿ ನಗರದ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನೀಶ್ ಸತ್ತಾರ ಕಂಪನಿ ಹೆಸರಿನ ಅಡಿಕೆ ವಕಾರಿಯ ಶೆಟರ್ಸ್ಗೆ ಹಾಕಿದ ಬೀಗ ಮುರಿದು ಕಳ್ಳರು ಚಾಲಿಯನ್ನು ಕದ್ದಿದ್ದಾರೆ.
ಅಡಿಕೆಯನ್ನು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಹಾಗೂ ಕಳುವಾದ ಅಡಿಕೆಯನ್ನು ಪತ್ತೆ ಮಾಡುವಂತೆ ಹಾಗೂ ಕಳ್ಳತನ ಮಾಡಿದವರ ಮೇಲೆ ಕಾನೂನಿನಂತೆ ಕ್ರಮ ಕೈಗೊಳ್ಳುವಂತೆ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ವಿಸ್ಮಯ ನ್ಯೂಸ್, ಶಿರಸಿ