ಕಿರು ಸೇತುವೆಯಿಂದ ಜಿಗಿದು ನೇಣಿಗೆ ಶರಣಾದ ಯುವಕ ?

ಅಂಕೋಲಾ: ಕಿರು ಸೇತುವೆಯೊಂದಕ್ಕೆ ಹಗ್ಗದ ಒಂದು ತುದಿ ಕಟ್ಟಿ , ಹಗ್ಗದ ಇನ್ನೊಂದು ತುದಿಯನ್ನು ನೇಣು ಮಾಡಿಕೊಂಡು ಕುತ್ತಿಗೆಗೆ ಬಿಗಿದುಕೊಂಡ ಯುವಕನೋರ್ವ ನೇಣಿಗೆ ಶರಣಾದ ಘಟನೆ ಅವರ್ಸಾದ ಅಜ್ಜಪ್ಪ ಶೇಟವಾಡಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಅವರ್ಸಾ ರಾಜೇಶ ಕೃಷ್ಣ ಗಾಂವಕರ ( 20 ) ಮೃತ ದುರ್ದೈವಿಯಾಗಿದ್ದು ಈತನು ಮೂಡಕಟ್ಟಾ – ಹಾರವಾಡ ವ್ಯಾಪ್ತಿಯ ಕಿರು ಸೇತುವೆಗೆ ಹಗ್ಗ ಕಟ್ಟಿ ,ಕುತ್ತಿಗೆಗೆ ನೇಣು ಬಿಗಿದುಕೊಂಡು ಮೇಲಿನಿಂದ ಜಿಗಿದು ಅದಾವುದೋ ಕಾರಣದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಕೇಳಿ ಬಂದಿದೆ. ಬೆಳಿಗ್ಗೆ ಅದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ತಲುಪಿಸಿದ್ದಾರೆ.

ಸಿಪಿಐ ಚಂದ್ರಶೇಖರ ಮಠಪತಿ , ಪಿ ಎಸ್ ಐ ಸುನೀಲ್ ಹುಲ್ಗೊಳ್ಳಿ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ ಹಾಗೂ ಸ್ಥಳೀಯರು ಸಹಕರಿಸಿದರು. ಮೃತ ಯುವಕ ವಿಪರೀತ ಸರಾಯಿ ಕುಡಿತದ ಚಟ ಹೊಂದಿದ್ದ ಎಂದು ಕೆಲ ಸ್ಥಳೀಯರು ಮಾತನಾಡಿಕೊಂಡಂತಿದ್ದು , ಆತ್ಮಹತ್ಯೆಗೆ ನಿಖರ ಕಾರಣಗಳೇನಿರಬಹುದು ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version