ಅಂಕೋಲಾ : ತಾಲೂಕಿನ ಹಿಲ್ಲೂರು ಗ್ರಾ ಪಂ ವ್ಯಾಪ್ತಿಯ ತಿಂಗಳಬೈಲ್ ನ ವಿಠಲ್ ವಾಸು ಬಾಂದಿ ಇವರ ಮನೆಯಲ್ಲಿ ಎಲ್ಲರೂ ಮಲಗಿರುವಾಗ , ಯಾರೋ ಕಳ್ಳರು ಡಿಸೆಂಬರ್ 9 ರ ರಾತ್ರಿಯಿಂದ – ನಸುಕಿನ ವೇಳೆ ಮನೆಯ ಒಳಗೆ ಪ್ರವೇಶಿಸಿ ದೇವರ ಕೋಣೆಯ ಬೀಗ ಮುರಿದು ಅಲ್ಲಿದ್ದ ಲಕ್ಷಾಂತರ ಮೌಲ್ಯ ಬೆಲೆಬಾಳುವ ಸುಮಾರು 47 ಲೋಹದ ಮೂರ್ತಿಗಳು , 5 ಕಪಿಲ್ ಕಲ್ಲು ಗುಂಡುಗಳು ,ಮತ್ತು ಬಾಂದಿ ಇವರ ಪತ್ನಿಯ ನೊಕಿಯಾ ಮೊಬೈಲ್ 1 ನ್ನು ಕಳು ಮಾಡಿಕೊಂಡು ಹೋದ ಬಗ್ಗೆ , ಫಿರ್ಯಾದಿ ಬಾಂದಿ ಇವರು ಅಂಕೋಲಾ ಪೊಲೀಸ್ ಠಾಣೆಯ (ತನಿಖೆ ವಿಭಾಗದ 1 ) ಪಿಎಸ್ಐ ಜಯಶ್ರೀ ಪ್ರಭಾಕರ ಇವರ ಬಳಿ ಲಿಖಿತ ದೂರು ನೀಡಿದ್ದರು . ಕಳ್ಳತನ ನಡೆದು ಪ್ರಕರಣ ದಾಖಲಾದ ಬೆನ್ನಿಗೇ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಪೊಲೀಸರು , 24 ಗಂಟೆಯ ಒಳಗೆ ಕಳ್ಳತನದ ಜಾಡು ಭೇಧಿಸಿ ಯಶಸ್ವಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಕಳ್ಳತನ ನಡೆದು ಪ್ರಕರಣ ದಾಖಲಾದ ಬೆನ್ನಿಗೇ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಪೊಲೀಸರು , 24 ಗಂಟೆಯ ಒಳಗೆ ಕಳ್ಳತನದ ಜಾಡು ಭೇಧಿಸಿ ಯಶಸ್ವಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಂ ನಾರಾಯಣ , ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಮ್ ಜಗದೀಶ್ , ಕಾರವಾರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಗಿರೀಶ್ ಎಸ್ ವಿ ರವರುಗಳ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಚಂದ್ರಶೇಖರ ಮಠಪತಿ ರವರ ನೇತೃತ್ವದಲ್ಲಿ ಉದ್ದಪ್ಪ ದರೆಪ್ಪನವರ ಪಿ.ಎಸ್.ಐ.(ಕಾ&ಸು) , ಹಾಗೂ ತನಿಖಾಧಿಕಾರಿಯಾದ ಕುಮಾರಿ ಜಯಶ್ರೀ ಪ್ರಭಾಕರ ಪಿ.ಎಸ್.ಐ.(ತನಿಖೆ-01) ಮತ್ತು ಸಿಬ್ಬಂದಿಗಳಾದ ಮಹಾದೇವ ಸಿದ್ಧಿ, ಅಂಬರೀಶ ನಾಯ್ಕ, ಪ್ರಶಾಂತ ನಾಯ್ಕ, ಶ್ರೀಕಾಂತ ಕಟಬರ, ಮನೋಜ ಡಿ, ಆಸಿಫ್ ಆರ್ ಕೆ, ರೋಹಿದಾಸ ದೇವಾಡಿಗ, ಶಿವಾನಂದ ನಾಗರದಿನ್ನಿ, ಜೀಪ ಚಾಲಕರಾದ ಸತೀಶ ನಾಯ್ಕ, ರವಿ ಹಡಪದ ಹಾಗೂ ಕಾರವಾರ ಗ್ರಾಮೀಣ ಠಾಣೆಯ ಹನುಮಂತ ಸರೀಕರ ಇವರುಗಳ ತಂಡ ಆರೋಪಿತರ ಬಗ್ಗೆ ಮಾಹಿತಿ ಸಂಗ್ರಹಿಸಿ ದಿನಾಂಕ: 09-12-2024 ರಂದು ಆರೋಪಿತರಾದ 1] ಚಿ. ಶ್ರೀನಿವಾಸ ತಂದೆ ಗುರುಸ್ವಾಮಿ ಪ್ರಾಯ: 41 ವರ್ಷ, ವೃತ್ತಿ: ಕೆ.ಪಿ.ಸಿ.ಯಲ್ಲಿ ನೌಕರ ಸಾ: ಕೆಪಿಸಿ ಕಾಲೋನಿ, ಕದ್ರಾ 2) ಅಶೋಕ ತಂದೆ ಹನುಮಂತಪ್ಪ ಬಂಡಿವಡ್ಡರ ಪ್ರಾಯ: 26 ವರ್ಷ, ವೃತ್ತಿ:ಮಶೀನ್ ಕೆಲಸ ಸಾ: ಟೋಲ್‌ನಾಕಾ ಹತ್ತಿರ, ಲಕ್ಷ್ಮೀಗಿರಿ, ಧಾರವಾಡ ಹಾಲಿ: ಸುಜುಕಿ ಶೋರೂಮ್ ಹತ್ತಿರ ಚಿತ್ತಾಕುಲಾ, ಕಾರವಾರ 3) ಮೌಲಾಲಿ ತಂದೆ ಮಹ್ಮದ ಅಜಾದ ಸೈಯದ ಪ್ರಾಯ: 30 ವರ್ಷ, ವೃತ್ತಿ: ಕೂಅ ಸಾ: ರಾಜೀವನಗರ, ಕದ್ರಾ ಕಾರವಾರ 4) ಮುಬಾರಕ ತಂದೆ ಇಬ್ರಾಹಿಂ ಶೇಖ್ ಪ್ರಾಯ: 26 ವರ್ಷ, ವೃತ್ತಿ: ಚಾಲಕ ಸಾ: ವೈಟ್‌ಪೀಲ್ಡ್, ಬೆಂಗಳೂರು, ಹಾಲಿ: ರಾಜೀವನಗರ, ಕದ್ರಾ, ಕಾರವಾರ 5) ಎ.ಎಸ್. ಶೇಖ್ ಶರೀಫ್ ತಂದೆ ಎ.ಎಸ್. ಅಬ್ದುಲ್ ರಹೀಮ್ ಪ್ರಾಯ:36 ವರ್ಷ, ವೃತ್ತಿ: ಕ್ಯಾಬ್‌ಡ್ರೈವರ್, ಸಾ: ತಿಗರಪಾಳ್ಯಾ, ಗಣೇಶ ಟೆಂಪಲ್ ಹತ್ತಿರ, ವೈಟ್ ಪೀಲ್ಡ್, 5ನೇ ಕ್ರಾಸ್, ಬೆಂಗಳೂರು 6) ಫುರಖಾನ ತಂದೆ ಮೆಹಬೂಬಖಾನ ಪ್ರಾಯ: 22 ವರ್ಷ, ವೃತ್ತಿ: ರೆಡಿಯಮ್ ಕಟ್ಟಂಗ್ ಸಾ: ಮಂಡಿಮೊಹಲ್ಲಾ, ಫೀರದೋಸ್ ಫಂಕ್ಷನ ಹಾಲ್ ಹತ್ತಿರ, ಮೈಸೂರು ಇವರನ್ನು ವಶಕ್ಕೆ ಪಡೆದು, ಆರೋಪಿತರ ಕಡೆಯಿಂದ 1) ಬಿಳಿ ಬಣ್ಣದ ಹೊಸ ಇನ್ನೋವಾ ಕ್ರೀಸ್ಟಾ ವಾಹನ ನಂ: ಕೆ.ಎ.-03/ಎ-ಎನ್-0642 2) ಬಿಳಿ ಬಣ್ಣದ ಮಾರುತಿ ಸುಜುಕಿ ಸ್ವೀಸ್ಟ್ ಕಾರ್ ನಂ: ಕೆ.ಎ.-30/ಎನ್-0145 3) ಕಪ್ಪು ಬಣ್ಣದ ಮಹೀಂದ್ರಾಲೋ ನಂ:ಕೆ.ಎ.-30/ಎಮ್-6802 4) ಡಿಯೋ ಸ್ಕೂಟರ್ ನಂ: ಕೆ.ಎ-30/ಎಕ್ಸ್-4613 ನೇದವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿತರು ಕೃತ್ಯಕ್ಕೆ ಬಳಸಿದ ವಾಹನಗಳಲ್ಲಿ ಒಟ್ಟು 16 ಹಿತ್ತಾಳೆಯ ನಮೂನೆಯ ದೇವರ ಮೂರ್ತಿಗಳನ್ನು ವಶಪಡಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಕೃತ್ಯ ನಡೆದ 24 ಗಂಟೆಯ ಒಳಗಾಗಿ ಪ್ರಕರಣವನ್ನು ಬೇದಿಸಿದ್ದು, ಈ ಪತ್ತೆ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸ ಇಲಾಖೆಯ ಹಿರಿಯ ಅಧಿಕಾರಿಗಳು , ಅಭಿನಂದಿಸಿ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ. ಮತ್ತು ಪೊಲೀಸ್ ರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದಲೂ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. ಒಂದೇ ಮನೆಯಲ್ಲಿರುವ ನೂರಾರು ಮೂರ್ತಿಗಳು ಬಂಗಾರದ್ದಿರಬಹುದು ಇಲ್ಲವೇ ಪುರಾತನ ಕಾಲದ ಲೋಹದ ಮೂರ್ತಿಗಳಿರಬಹುದು ಎಂದು,ಕೋಟಿ ಕೋಟಿ ಮೌಲ್ಯದ ಲೆಕ್ಕಾಚಾರ ಹಾಕಿ , ಅದಾರದೋ ಶಾಮಿಲಾತಿಯಲ್ಲಿ ಕಳ್ಳತನ ಕೃತ್ಯದಲ್ಲಿ ತೊಡಗಿಸಿಕೊಂಡವರ ಕೈಗಳಿಗೆ ಪೊಲೀಸರು ಕಾನೂನಿನ ಕೈ ಕೋಳ ತೊಡಿಸಿದಂತಾಗಿದೆ.
ತನಿಖೆ ಮುಂದುವರಿದಿದ್ದು ಈ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿರಬಹುದಾದ ಇತರೆ ಕೆಲವು ಆರೋಪಿತರಿಗೂ ಕೈ ಕೋಳ ಬೀಳುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಬಂಗಾರದ ಕಣಜ ಎಂದೇ ಹಲವರಲ್ಲಿ ಬಿಂಬಿತವಾಗಿದ್ದ ತಿಂಗಳ ಬೈಲ್ ನ ನೂರಾರು ದೇವರ ಮೂರ್ತಿಗಳ ವಿಚಾರಕ್ಕೆ ಸಂಭದಿಸಿದಂತೆ, ಇಲ್ಲಿನ ಆಚಾರ- ವಿಚಾರ ,ಮನೆಯವರ ನಡೆ – ನುಡಿ , ಮನೆಯಲ್ಲಿ ಬೆಳೆಯುತ್ತಿರುವ ಹುತ್ತ ಹಾಗೂ ಪ್ರಕರಣದ ಸುತ್ತ ಹೆಣೆದು ಕೊಂಡ ನಾನಾ ಅನುಮಾನದ ಹುತ್ತ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಒಂದೊಂದೇ ಸತ್ಯಾಂಶಗಳು ಹೊರಬರಲಾರಂಭಿಸಿದ್ದು , ಹಲವರ ಕೂತುಹಲ ನಂಬಿಕೆ ,ಮೌಢ್ಯ , ಇಲ್ಲಿನ ಅಸಲಿತನದ ಕುರಿತಾಗಿನ ಹಲವು ಅನುಮಾನದ ಪ್ರಶ್ನೆಗಳಿಗೆ ನೈಜ ಉತ್ತರ ದೊರೆಯಲಾರಂಭಿಸಿದಂತಿದೆ.
ಇದನ್ನು ಪೂಜಿಸಿಕೊಂಡು ಬಂದ ಬಾಂದಿ ಮನೆತನದವರು ಹಾಗೂ ಅವರ ಆಪ್ತರು ಮತ್ತು ಕೆಲ ಭಕ್ತ ಸಮೂಹ ,ಇವೆಲ್ಲ ದೇವರ ಮಹಿಮೆಯಾಗಿದ್ದು ಕಳ್ಳರು ಥಟ್ಟನೆ ಸಿಕ್ಕಿ ಬೀಳುವ ಮೂಲಕ ಸ್ಥಳದ ಶಕ್ತಿ ತೋರಿಸಿದಂತಾಗಿದೆ ಎಂದರೆ ,ಊರಿನ ಹಾಗೂ ಇತರಡೆಯ ಕೆಲವರ ಪ್ರಕಾರ ತ ಸರಕಾರಿ ನೌಕರರಾಗಿದ್ದುಕೊಂಡು ಬಾಂದಿ ದಂಪತಿಗಳು ಜನರ ನಂಬಿಕೆ ಮತ್ತು ಮೌಢ್ಯವನ್ನು ಉಪಯೋಗಪಡಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಈಗಲಾದರೂ ಅದೇ ದೇವರು ಕಣ್ಣು ತೆರೆದು ,ಪೂಜಾರಿ ಮನೆತನದ ಹಾಗೂ ಭಕ್ತರ ಕಣ್ಣು ತೆರೆಸಲಿ ಎಂದು ಹೇಳಲಾರಂಬಿಸಿದಂತಿದೆ. ಕಳ್ಳತನ ಆರೋಪದಡಿ ಸಿಕ್ಕಿಬಿದ್ದ ಕುಖ್ಯಾತ ಗ್ಯಾಂಗಿನಲ್ಲಿ ,ಪಕ್ಕದ ರಾಜ್ಯ ಗೋವಾದ ಕ್ಯಾಸಿನೋ ಹುಚ್ಚಿನ ಮೋಜು ಮಸ್ತಿ ಮಾಡುವವರು ,ಸರ್ಕಾರಿ ನೌಕರ ಸೇರಿದಂತೆ ಬೇರೆ ಬೇರೆಯವರು ಇದ್ದಾರೆ ಎನ್ನಲಾಗುತ್ತಿದೆ.
ಈ ಹಿಂದಿನ ಬೇರೆ ಯಾವೆಲ್ಲ ಪ್ರಕರಣಗಳಲ್ಲಿ ಭಾಗಿಯಾಗಿರಬಹುದೇ ? ಅಮದಳ್ಳಿ ವೀರ ಗಣಪತಿಯ ಬೆಳ್ಳಿ ಮುಖವಾಡ ಕದ್ದ ಕಳ್ಳರ ಪತ್ತೆ ಸಾಧ್ಯವೇ? ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದ್ದು , ತನಿಖೆ ಪೂರ್ಣಗೊಂಡ ಬಳಿಕ ಮತ್ತೆ ಕೆಲವರ ಮುಖವಾಡವೂ ಕಳಚಿ ಬೀಳುವ ಮತ್ತು ಆ ಮೂಲಕ ಇನ್ನು ಕೆಲವರು ಜೈಲು ಸೇರಲಿದ್ದಾರೆ ಎನ್ನಲಾಗುತ್ತಿದ್ದು , ದೇವರ ಆಟದಿಂತಿರುವ ಇವಕ್ಕೆಲ್ಲ ಮುಂದೆ ಕಾಲವೇ ಉತ್ತರಿಸಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ