ಅಂಕೋಲಾ ಖಾಸಗಿ ಬಂದರು ವಿವಾದ: ಡಿಸೆಂಬರ್ 19 ರೊಳಗೆ ಬಂದರು ನಿರ್ಮಾಣ ಸರ್ವೆ ಕಾರ್ಯ ನಿಲ್ಲಿಸದಿದ್ದರೆ ಬೃಹತ್ ಹೋರಾಟ

ಅಂಕೋಲಾ: ಬೃಹತ್ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿ ವಿರೋಧಿಸಿ ಈಗಾಗಲೇ ತಾಲೂಕಾಡಳಿತ , ಜಿಲ್ಲಾಡಳಿತಕ್ಕೆ ಸ್ಥಳೀಯ ಮೀನುಗಾರರು ಸೇರಿದಂತೆ ಇತರರೆಲ್ಲ ಕೂಡಿ ಮನವಿ ಸಲ್ಲಿಸಿ ವಾರದ ಗಡುವು ಕಳೆದಿದೆ. ಆದರೂ ಸೂಕ್ತ ಸ್ಪಂದನೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸ್ಥಳೀಯರು , ಡಿಸೆಂಬರ್ 19 ರೊಳಗೆ ಬಂದರು ನಿರ್ಮಾಣ ಸರ್ವೆ ಕಾರ್ಯ ನಿಲ್ಲಿಸದಿದ್ದರೆ , ಸಮುದ್ರಕ್ಕಿಳಿದು ಯಾಂತ್ರೀಕೃತ ದೋಣಿಗಳಿಂದ ಮುತ್ತಿಗೆ ಹಾಕಿ ಅಲ್ಲಿರುವ ಟಗ್ ಬೋಟ್ ಸಹಿತ ಖಾಸಗಿ ಕಂಪನಿಗೆ ಸಂಬoಧಿಸಿದ ಎಲ್ಲ ರೀತಿಯ ಯಂತ್ರ ಹಾಗೂ ಪರಿಕರಗಳನ್ನು ಎಳೆದು ತಂದು ಸಮುದ್ರ ದಡದತ್ತ ಇಡಲಾಗುವುದು ಎಂದು ಬಂದರು ವಿರುದ್ಧ ಹೋರಾಟ ಸಮಿತಿಯವರು ಎಚ್ಚರಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ಖಾಸಗೀ ಸಹಭಾಗಿತ್ವದಲ್ಲಿ ಸುಮಾರು ನಾಲ್ಕು ಸಾವಿರ ಕೋಟಿ ರೂ ಗಳಿಗೂ ಹೆಚ್ಚು ಬಂಡವಾಳದೊoದಿಗೆ ಬೃಹತ್ತ್ ವಾಣಿಜ್ಯ ಬಂದರು ಕಾಮಗಾರಿ ನಿರ್ಮಾಣ ಕಾಮಗಾರಿಗೆ ಸಿದ್ಧತೆಗಳು ಗರಿಗೆದರುತ್ತಿದ್ದು ,ಸಮುದ್ರದಲ್ಲಿ ಲಂಗರು ಹಾಕಿರುವ ಕೆಲ ಯಂತ್ರಗಳು , ನಡೆಸುತ್ತಿರುವ ಸರ್ವೇ ಕಾರ್ಯ ಸ್ಥಳೀಯ ಮೀನುಗಾರರು ಸೇರಿದಂತೆ ಹಲವರ ನಿದ್ದೆಗೆಡಿಸಿದೆ.

ಸ್ಥಳೀಯರ ಅಹವಾಲು ಆಲಿಸದೇ ,ಬಡವರ ಹೊಟ್ಟೆಯ ಮೇಲೆ ಬರೆ ಎಳೆಯಲು ಬಂದAತಿರುವ ಈ ಯೋಜನೆಗ ಭಾವಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೀನುಗಾರರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಇತ್ತೀಚೆಗೆ ಬಂದರು ವಿರೋಧಿ ಹೋರಾಟ ಸಮಿತಿ ಮೂಲಕ ಬೃಹತ್ ಸಭೆ ,ಪಾದಯಾತ್ರೆ ನಡೆಸಿ ತಾಲೂಕ ಆಡಳಿತಕ್ಕೆ ಮನವಿ ಆ ಬಳಿಕ ಜಿಲ್ಲಾ ಕೇಂದ್ರ ಕಾರವಾರ ಕ್ಕೆ ತೆರಳಿ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಧಿಕಾರಿಗಳು ಮತ್ತು ಸಂಬAಧಿತ ಇತರೆ ಇಲಾಖೆಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಮನವಿ ನೀಡಲಾಗಿತ್ತು.

ವಾರದ ಗಡುವು ಮುಗಿದರೂ ಆಡಳಿತ ವರ್ಗದಿಂದ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ,ಅಸಮಾಧಾನಗೊಂಡಿರುವ ಸ್ಥಳೀಯರು ,ತಾಲೂಕಿನ ಜಿಲ್ಲೆಯ ಹಾಗೂ ಇತರಡೆಯ ಮೀನುಗಾರ ಸಮುದಾಯ ಮತ್ತಿತರರ ಬೃಹತ್ ಬೆಂಬಲದೊAದಿಗೆ ಹೋರಾಟವನ್ನು ತೀವ್ರಗೊಳಿಸಲು ಮುಂದಾದoತಿದೆ. ಈ ಕುರಿತು ಕೇಣೆಯ ದೇಶಿನ ಭಾಗದಲ್ಲಿ ಸುದ್ದಿಗೋಷ್ಠಿ ಕರೆದು ಮುಂದಿನ ನಡೆಯ ಬಗ್ಗೆ ವಿವರಣೆ ನೀಡಲಾಯಿತು.ಬಂದರು ವಿರೋಧಿ ಹೋರಾಟ ಸಮಿತಿಯ ಪ್ರಮುಖ ಹಾಗೂ ಮೀನುಗಾರ ಮುಖಂಡ ಶ್ರೀಕಾಂತ್ ದುರ್ಗೇಕರ್ ಮಾತನಾಡಿ , ಈಗಾಗಲೇ ನಾವು ತಾಲೂಕಾಡಳಿತ ಜಿಲ್ಲಾಡಳಿತ ಹಾಗೂ ಬಂದರು ಇಲಾಖೆ ಮೀನುಗಾರಿಕೆ ಇಲಾಖೆ ಮತ್ತಿತರ ಸಂಬoಧಿತ ಇಲಾಖೆಗಳಿಗೆ ಮಾಣಿಕ್ಯ ಬಂದರೂ ಯೋಜನೆ ಬೇಡವೇ ಬೇಡ ,ಸಮುದ್ರದಲ್ಲಿ ನಡೆಯುತ್ತಿರುವ ಸರ್ವೆ ಮತ್ತಿತರ ಕಾರ್ಯವನ್ನು ಒಂದು ವಾರದ ಒಳಗೆ ತಗಿತಗೊಳಿಸುವಂತೆ ಸೂಚನೆ ನೀಡಬೇಕೆಂದು ಮನವಿ ನೀಡಿ ವಿನಂತಿಸಿದ್ದರು ,

ಸ್ಥಳೀಯರ ಭಾವನೆಗೆ ಸ್ವಂದಿಸಿದೇ ಆಡಳಿತ ವರ್ಗ ನಿರ್ಲಕ್ಷ ತೋರಿದಂತಿದೆ. ಹೀಗಾಗಿ ಡಿಸೆಂಬರ್ 19ರ ಒಳಗೆ ಸರ್ವೇ ಮತ್ತಿತರ ಕಾರ್ಯ ಸ್ಥಗಿತಗೊಳಿಸುವಂತೆ ಈ ಮೂಲಕ ಅಂತಿಮ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಈಗಲೂ ನಮ್ಮ ಮನವಿ ಹಾಗೂ ಭಾವನೆಗೆ ಸ್ಪಂದಿಸದಿದ್ದಲ್ಲಿ ಯಾಂತ್ರೀಕೃತ ಬೋಟುಗಳ ಮೂಲಕ ಸಮುದ್ರಕ್ಕಿಳಿದು , ಅಲ್ಲಿ ಲಂಗರು ಹಾಕಿರುವ ಖಾಸಗಿ ಕಂಪನಿಯ ಟಗ್ ಮತ್ತಿತರ ಯಂತ್ರ ಹಾಗೂ ಪರಿಕರಗಳನ್ನು ಎಳೆದು ತಂದು ಸಮುದ್ರದಡದಲ್ಲಿ ಇಡುತ್ತೇವೆ. ಈ ವೇಳೆ ಏನಾದರೂ ಅನಾಹುತವಾದರೆ ಆಡಳಿತ ವರ್ಗವೇ ಹೊಣೆ ಎಂದು ಎಚ್ಚರಿಸಿದರು.

ಮೀನುಗಾರರ ಮುಖಂಡ ಹೂವಾ ಖಂಡೇಕರ ಮಾತನಾಡಿ ವಾಣಿಜ್ಯ ಬಂದರು , ನಮ್ಮ ಸ್ಥಳೀಯ ಜನರ ಕುಲಕಸುಬಾದ ಮೀನುಗಾರಿಕೆ ಸಂಪೂರ್ಣ ನಾಶವಾಗಲಿದೆ. ರಕ್ಷಣೆ ಮತ್ತು ಸುರಕ್ಷರತೆಯ ನೆಪದಲ್ಲಿ ಮೀನುಗಾರಿಕೆಯನ್ನು ನಿಷೇಧಿಸಿದರೆ ನಾವೆಲ್ಲ ಎಲ್ಲಿ ಹೋಗಬೇಕು. ಬೇಕಿದ್ದರೆ ಮೀನುಗಾರಿಕೆಯ ಬಂದರನ್ನೇ ಅಭಿವೃದ್ದಿಪಡಿಸಲಿ ವಾಣಿಜ್ಯ ಬಂದರು ಬೇಡವೇ ಬೇಡ ಎಂದರು.

ಸುದ್ದಿಗೋಷ್ಠಿಯಲ್ಲಿ ಸೂರಜ ಹರಿಕಂತ್ರ, ಶಂಕರ ಎಸ್ ಬಲೆಗಾರ, ಪ್ರಮೋದ ಬಾನಾವಳಿಕರ, ಸೂರ್ಯಕಾಂತ ಭೂತೆ, ಜ್ಞಾನೇಶ್ವರ ವಿ ಹರಿಕಂತ್ರ, ಮಹೇಶ ವ್ಹಾಯ್ ದುರ್ಗೇಕರ, ಅನೀಲ ತಾಂಡೇಲ, ಹಾಲಪ್ಪ ಜಿ ಹರಿಕಂತ್ರ, ವೆಂಕಟೇಶ ಕೆ ದುರ್ಗೇಕರ, ಪ್ರಭಾಕರ ಖಾರ್ವಿ ಸೇರಿದಂತೆ ಸುತ್ತಮುತ್ತಲ ನೂರಾರು ಮೀನುಗಾರರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version