ಸಿದ್ದಾಪುರ: ಪಟ್ಟಣದಲ್ಲಿ ಖಾಸಗಿ ಬ್ಯಾಂಕ್ ವೊಂದರಲ್ಲಿ ಪಿಗ್ಮಿ ಸಂಗ್ರಹಿಸುತ್ತಿದ್ದ ಮಹಿಳೆಯೋರ್ವಳನ್ನ ದುಷ್ಕರ್ಮಿಗಳು ಆಕೆಯ ವಾಸದ ಮನೆಯಲ್ಲಿನ ಬಚ್ಚಲು ಮನೆಯ ಹಂಚನ್ನು ತೆಗೆದು ಪ್ರವೇಶಿಸಿ, ಕೊಲೆ ಮಾಡಿ ಪಿಗ್ಮಿ ಹಣವನ್ನು ತೆಗೆದುಕೊಂಡು ಹೋದ ಘಟನೆ ಸಿದ್ದಾಪುರ ಪಟ್ಟಣದ ಸೊರಬ ರಸ್ತೆಯಲ್ಲಿರುವ ಬಸವನಗಲ್ಲಿಯಲ್ಲಿ ನಡೆದಿದೆ. ಗೀತಾ ಪ್ರಭಾಕರ ಹುಂಡೇಕರ್ (72 )ಕೊಲೆಯಾದ ಮಹಿಳೆ.
ಮೃತಳು ಪಟ್ಟಣದ ಖಾಸಗಿ ಬ್ಯಾಂಕ್ ಗೆ ಪಿಗ್ಮಿ ಕಲೆಕ್ಷನ್ ಮಾಡಿ ಸಂಗ್ರಹವಾದ ಹಣವನ್ನ ಮಾರನೇ ದಿನ ಬ್ಯಾಂಕಿಗೆ ತುಂಬುತ್ತಿದಳು. ದಿನನಿತ್ಯ 5ರಿಂದ 10ಸಾವಿರ ರೂಪಾಯಿ ಸಂಗ್ರಹ ಮಾಡುತ್ತಿದಳು. ಹೀಗಿರುತ್ತಾ ಡಿಸೇಂಬರ್ 23-24ರ ನಡುವಿನ ಅವಧಿಯಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿರುವುದಾಗಿ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಕೊಲೆಗಾರರ ಪತ್ತೆಗೆ ಬಲೆ ಬೀಸಿದ್ದಾರೆ.
ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ