ಅಂಕೋಲಾ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ವಂದಿಗೆಯ ಹೊನ್ನಾ -ರಾಕಾ ಹಾಗೂ ನಾಗ ದೇವತಾ ದೇವಸ್ಥಾನದಲ್ಲಿ ಅಲಂಕಾರ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಇಂದು (ಡಿಸೆಂಬರ್ 29 ರಂದು) ರವಿವಾರ ನಡೆಯಲಿದೆ.
ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ 9 ಗಂಟೆಯಿಂದ ಮದ್ಯಾಹ್ನ 12 ಗಂಟೆ ವರೆಗೆ ಭಕ್ತಿ ಸಂಗೀತ ಕಾರ್ಯಕ್ರಮ , ನಂತರ ಮಹಾಪೂಜೆ ನೆರವೇರಲಿದೆ. ಹಾಗೂ ಆಗಮಿಸಿದ ಭಕ್ತರಿಗೆ ಶ್ರೀ ದೇವರ ಪ್ರಸಾದ ಅನ್ನ ಸಂತರ್ಪಣೆ ಮಧ್ಯಾಹ್ನ 1.00 ರಿಂದ 3.00 ಘಂಟೆ ವರೆಗೆ ನಡೆಯಲಿದ್ದು ,ಭಕ್ತ ಮಹನೀಯರು ಆಗಮಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನ ಆಡಳಿತ ಮಂಡಳಿ ಪರವಾಗಿ ವಿನಂತಿಸಲಾಗಿದೆ.
ರವಿವಾರ ರಾತ್ರಿ 9.00 ಘಂಟೆಗೆ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟೆ ಶಿರಿಯಾರ ಇವರಿಂದ , ವಿದ್ಯಾಧರ ರಾವ್ ಜಲವಳ್ಳಿ ಸಾರಥ್ಯದಲ್ಲಿ ಸಮಗ್ರ ಕಂಸ ಎಂಬ ಪೌರಾಣಿಕ ಯಕ್ಷಗಾನ ಕಥಾ ಭಾಗವನ್ನು ಆಡಿ ತೋರಿಸಲಿದ್ದು , ಕಲಾ ಭಿಮಾನಿಗಳು , ದೇವಸ್ಥಾನದ ಭಕ್ತವೃಂದ ಹಾಗೂ ಇತರೆ ಸಾರ್ವಜನಿಕರು , ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಶ್ರೀ ದೇವರ ಈ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಸಹಕಾರ ನೀಡುವಂತೆ ದೇವಸ್ಥಾನ ಆಡಳಿತ ಮಂಡಳಿ ಹಾಗೂ ವಂದಿಗೆಯ ಊರ ನಾಗರಿಕರು ಕೋರಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ