ಸಿದ್ದಾಪುರ : ಶಿರಸಿಯಿಂದ ಹರಿಶಿ ಚಂದ್ರಗುತ್ತಿ ಮಾರ್ಗವಾಗಿ ಸಿದ್ದಾಪುರಕ್ಕೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗದ್ದೆಗೆ ನುಗ್ಗಿ ನಿಂತ ಘಟನೆ ಸಿದ್ದಾಪುರ ತಾಲೂಕಿನ ಬಳ್ಳಟ್ಟೆ ಕ್ರಾಸ್ ಬಳಿ ನಡೆದಿದೆ. ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಬಳಿ ರಸ್ತೆ ಏರು ತಗ್ಗು ಇರುವುದರಿಂದ ಬಸ್ ರಸ್ತೆಯಿಂದ ಮೇಲಕ್ಕೆ ಜಿಗಿದಿದೆ.
ಈ ಸಂದರ್ಭದಲ್ಲಿ ಚಾಲಕನಿಗೆ ನಿಯಂತ್ರಣ ತಪ್ಪಿದೆ ನಂತರ ಬಸ್ ನ ಮುಂದಿನ ವೀಲ್ ಕಟ್ಟಾಗಿ ಗದ್ದೆಗೆ ನುಗ್ಗಿದೆ. ಚಾಲಕನು ನಿಲ್ಲಿಸಲು ಪ್ರಯತ್ನ ಪಟ್ಟರು ಬಸ್ ನಿಯಂತ್ರಣ ಕ್ಕೆ ಸಿಕ್ಕಿಲ್ಲ ಈ ಕಾರಣದಿಂದ ಘಟನೆ ನಡೆದಿದೆ ಎಂದು ಸ್ಥಳದಲ್ಲಿ ಪ್ರತ್ಯಕ್ಷ ದರ್ಶಿಗಳು ಮಾತನಾಡಿಕೊಳ್ಳುತ್ತಿದ್ದರು . ಬಸ್ಸಿನಲ್ಲಿ ಸುಮಾರು 30ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ ಅದರಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು, ಚಾಲಕನ ಸೇರಿ ನಾಲ್ವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಆಗುವ ಹೆಚ್ಚಿನ ಅಪಾಯ ತಪ್ಪಿದೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರಿಗೆ ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ.
ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ