Important
Trending

ಶಾಲಾ ಮಕ್ಕಳ ಕಾರ್ಯಕ್ರಮ ನೋಡಿ ಬರಲು ಹೋದವ ರೈಲು ಬಡಿದು ದುರ್ಮರಣ

ಅಂಕೋಲಾ : ಚಲಿಸುತ್ತಿದ್ದ ರೈಲು ಗಾಡಿ ಬಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬೆಳಸೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಸ್ಥಳೀಯ ಗ್ರಾಪಂ ವ್ಯಾಪ್ತಿಯ ಹಂದಿಗದ್ದೆ ನಿವಾಸಿ ವಿಘ್ನೇಶ್ವರ ನಾಗೇಶ ಗೌಡ(29) ಮೃತ ದುರ್ದೈವಿಯಾಗಿದ್ದು , ಹತ್ತಿರದ ಶಾಲೆಯಲ್ಲಿ ನಡೆಯುತ್ತಿರುವ ಮಕ್ಕಳ ಕಾರ್ಯಕ್ರಮ ನೋಡಿ ಬರುವುದಾಗಿ ರವಿವಾರ ರಾತ್ರಿ ಮನೆಯಿಂದ ಹೊರಟ ಈತನಿಗೆ ರವಿವಾರ ರಾತ್ರಿ 11 ಗಂಟೆಯಿಂದ ಸೋಮವಾರ ಮುಂಜಾನೆ 6 ಗಂಟೆಯ ನಡುವಿನ ಸಮಯದಲ್ಲಿ ಬೆಳಸೆ ರೈಲ್ವೆ ಸೇತುವೆ ಮೇಲೆ ಯಾವುದೋ ಚಲಿಸುತ್ತಿರುವ ರೈಲು ಬಡಿದು ಸ್ಥಳದಲ್ಲೇ ಮೃತ ಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ , ಮತ್ತು ಸ್ಥಳೀಯರು ಸಹಕರಿಸಿದರು. ಶಂಕರ್ ಗೌಡ , ಮಾರುತಿ ಗೌಡ ಸೇರಿದಂತೆ ಸ್ಥಳೀಯ ಮುಖಂಡರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button