
ಸಿದ್ದಾಪುರ: ಸುಮಾರು 45 ಕೆಜಿ ಅಡಿಕೆ ಕಳ್ಳತನ ಮಾಡಿದ್ದ ಆರೋಪಿಯನ್ನು ಕದ್ದ ಅಡಿಕೆ ಸಮೇತವಾಗಿ ಬಂಧಿಸುವಲ್ಲಿ ಸಿದ್ದಾಪುರ ಪೋಲಿಸರು ಯಶಸ್ವಿಯಾಗಿದ್ದಾರೆ. ತಾಲೂಕಿನ ಕೊಲಸಿರ್ಸಿ ಗುಡ್ಡೆಕೇರಿಯ ಕಾಶಿನಾಥ ಕೃಷ್ಣ ನಾಯ್ಕ ಎಂಬಾತನೇ ಅಡಿಕೆ ಕಳ್ಳತನ ಮಾಡಿದ ಆರೋಪಿಯಾಗಿದ್ದಾನೆ. ಈತನು ಕೊಲಸಿರ್ಸಿ ಗ್ರಾಮದ ಮಾರುತಿ ಗಲ್ಲಿಯಲ್ಲಿ ನಾಗರಾಜ ಗೌಡರ ಮನೆಯ ಅಂಗಳದಲ್ಲಿ ದಾಸ್ತಾನು ಮಾಡಿದ್ದ ಸುಮಾರು 45 ಕೆ.ಜಿ ಅಡಿಕೆ ಕಳ್ಳತನ ಮಾಡಿದ್ದ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ