ಜಲಪಾತದಲ್ಲಿ ಮುಳುಗಿ ಇಬ್ಬರ ಸಾವು

ಸಿದ್ದಾಪುರ : ಜಲಪಾತದ ನೀರಿನಲ್ಲಿ ಆಟ ಆಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ 20 ಅಡಿ ಆಳದ ಗುಂಡಿಗೆ ಬಿದ್ದು ಇಬ್ಬರು ಮೃತಪಟ್ಟ ಘಟನೆ ತಾಲೂಕಿನ ನಿಲ್ಕುಂದ ಸಮೀಪದ ವಾಟೆಹಳ್ಳ ಫಾಲ್ಸ್ ನಲ್ಲಿ ನಡೆದಿದೆ. ಶಿರಸಿಯ ಹೊಸಪೇಟೆಯ ಅಕ್ಷಯ ಪರಮೇಶ್ವರ್ ಭಟ್, ಮರಾಠಿ ಕೊಪ್ಪದ ಸುಹಾಸ್ ಪ್ರಕಾಶ್ ಶೇಟ್ ಮೃತ ದುರ್ದೈವಿಗಳಾಗಿದ್ದಾರೆ.

ಘಟನೆಗೆ ಸಂಬoಧಿಸಿದoತೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಆರು ಜನರು ಪ್ರವಾಸಕ್ಕೆಂದು ಇಲ್ಲಿನ ವಾಟೆಹಳ್ಳ ಫಾಲ್ಸ್ ಗೆ ತೆರಳಿದ್ದರು. ದುರ್ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಶಿರಸಿಯ ಡಿವೈಎಸ್‌ಪಿ, ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್‌ಐ, ಪೊಲೀಸ್ ಸಿಬ್ಬಂದಿ ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಿದ್ದರು. ಘಟನೆ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Exit mobile version