Important
Trending

ರಾಜ್ಯಮಟ್ಟದ ಚುಟುಕು ಸ್ಪರ್ಧೆಯಲ್ಲಿ ವಿಠ್ಠಲ ಗಾಂವಕಾರ ಮತ್ತು ಪ್ರಭಾಕರ ನಾಯಕ ಅವರ ಚುಟುಕು ಕೃತಿಗಳಿಗೆ ಬಹುಮಾನ

ಅಂಕೋಲಾ : ಅಂಕೋಲೆಯ ಹಿರಿಯ ಸಾಹಿತಿಗಳಾದ ವಿಠ್ಠಲ ಗಾಂವಕರ ಹಾಗೂ ಪ್ರಭಾಕರ ನಾಯಕರ ಚುಟುಕು ಕೃತಿಗಳಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರಕಿದೆ. ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ತನ್ನ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ರಾಜ್ಯಮಟ್ಟದ ಚುಟುಕು ಸಾಹಿತ್ಯ ಕೃತಿಗಳ ಸ್ಪರ್ಧೆಯನ್ನು ಏರ್ಪಡಿಸಿತ್ತು. ೪೫ ಚುಟುಕು ಸಾಹಿತ್ಯ ಕೃತಿಗಳು ಸ್ಪರ್ಧೆಯಲ್ಲಿದ್ದವು.

ಮಾರ್ಚ್ 2 ರಂದು ಬೆಳಗಾವಿ ಚುಟುಕು ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬ ಸಮಾರಂಭ

ಈ ಸ್ಪರ್ಧೆಯಲ್ಲಿ ವಿಠ್ಠಲ ಗಾಂವಕಾರರ ‘ಅವ್ವಳ ನುಡಿದಂಡೆ’ ಚೌಪದಿ ಗ್ರಂಥ ದ್ವಿತೀಯ ಸ್ಥಾನ ಪಡೆದರೆ, ಡಾ. ಪ್ರಭಾಕರ ನಾಯಕರ ‘ಮಂಗಳಾರತಿ’ ಕೃತಿ ತೃತೀಯ ಸ್ಥಾನ ಪಡೆದಿದೆ. ಈ ಪ್ರಶಸ್ತಿಗಳು ಚುಟುಕು ಬ್ರಹ್ಮ ದಿನಕರ ದೇಸಾಯಿಯವರ ಊರು ಚುಟುಕು ಸಾಹಿತ್ಯದ ತವರೂರು ಎಂಬುದು ಸಾಬೀತುಪಡಿಸಿದಂತಿದೆ ಎಂದು ದೇಸಾಯಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಮಾರ್ಚ್ 2 ರಂದು ನಡೆಯಲಿರುವ ನಾಲ್ಕನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಈ ಬಹುಮಾನವನ್ನು ವಿತರಿಸುವರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button