
ಶಿರಸಿಯಲ್ಲಿ ವೈದ್ಯರ ಸಾವು
ಕುಮಟಾ ತಾಲೂಕಿನಲ್ಲಿ ಧಾರೇಶ್ವರ, ಚಿತ್ರಗಿ, ಹೆಗಡೆ, ಹಂದಿಗೋಣ, ಕೋನಳ್ಳಿ, ದೀವಗಿ, ಬಾಡ, ಹಿರೇಗುತ್ತಿ, ತದಡಿ, ಗೋಕರ್ಣ ಮುಂತಾದ ಭಾಗದಲ್ಲಿ ಸೋಂಕು
[sliders_pack id=”1487″] ಕುಮಟಾ: ತಾಲೂಕಿನಲ್ಲಿ ಕರೊನಾ ಆರ್ಭಟ ಮುಂದುವರಿದಿದೆ. ಇದೇ ವೇಳೆ, ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರಿಗೆ ಕರೊನಾ ದೃಢಪಟ್ಟಿದೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದಾರೆ. ರೋಗದ ಲಕ್ಷಣ ಕಂಡುಬoದ ಹಿನ್ನಲೆಯಲ್ಲಿ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಟೆಸ್ಟ್ ಗೆ ಒಳಗಾಗಿದ್ದರು. ವರದಿ ಪಾಸಿಟಿವ್ ಬಂದಿದ್ದು, ಅವರ ಪತ್ನಿ ಮತ್ತು ಮಕ್ಕಳ ವರದಿ ನೆಗೆಟಿವ್ ಬಂದಿದೆ ಎಂಬ ಮಾಹಿತಿ ಬಂದಿದೆ.
ಕುಮಟಾ ತಾಲೂಕಾ ವ್ಯಾಪ್ತಿಯಲ್ಲಿ ಇಂದು 22 ಪಾಸಿಟಿವ್ ಪ್ರಕರಣ ದಾಖಲಾಗಿದೆ . ಕುಮಟಾ ತಾಲೂಕಿನ ಧಾರೇಶ್ವರ, ಚಿತ್ರಗಿ, ಹೆಗಡೆ, ಹಂದಿಗೋಣ, ಕೋನಳ್ಳಿ, ದೀವಗಿ, ಬಾಡ, ಹಿರೇಗುತ್ತಿ, ತದಡಿ, ಗೋಕರ್ಣ ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ. ಧಾರೇಶ್ವರದ 26 ವರ್ಷದ ಯುವಕ, ಚಿತ್ರಗಿಯ 33 ವರ್ಷದಮಹಿಳೆ, ಹೆಗಡೆಯ 65 ವರ್ಷದ ಪುರುಷ, ಕೋನಳ್ಳಿಯ 72 ವರ್ಷದ ವೃದ್ಧ, ದೀವಗಿಯ 5 ವರ್ಷದ ಬಾಲಕ, ಹಂದಿಗೋಣದ 70 ವರ್ಷದ ವೃದ್ಧೆ, ಬಾಡದ 57 ವರ್ಷದ ಮಹಿಳೆ, ಹೆರವಟ್ಟಾದ 19 ವರ್ಷದ ಯುವತಿ ಹಿರೆಗುತ್ತಿಯ 12 ವರ್ಷದ ಬಾಲಕಿ, 44 ವರ್ಷದ ಮಹಿಳೆ, 37 ವರ್ಷದ ಮಹಿಳೆ, 35 ವರ್ಷದ ಮಹಿಳೆ, 20 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಗೋಕರ್ಣದ 26 ವರ್ಷದ ಪುರುಷ, ಗೋಕರ್ಣದ ತಾರಿಮಕ್ಕಿಯ 43 ವರ್ಷದ ಪುರುಷ, ತದಡಿಯ 47 ವರ್ಷದ ಪುರುಷನಲ್ಲಿ ಸೋಂಕು ಕಂಡುಬAದಿದೆ. ಕುಮಟಾ ಪಟ್ಟಣ ವ್ಯಾಪ್ತಿಯಲ್ಲಿಯೇ 5 ಪ್ರಕರಣ ದಾಖಲಾಗಿದ್ದು 48 ವರ್ಷದ ಮಹಿಳೆ, 42 ವರ್ಷದ ಪುರುಷ, 57 ವರ್ಷದ ಪುರುಷ, 28 ವರ್ಷದ ಮಹಿಳೆ, 1 ವರ್ಷದ ಮಗುವಿನಲ್ಲಿ ಸೊಂಕು ದೃಢಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಮತ್ತೊಬ್ಬ ವೈದ್ಯರ ಸಾವು
ಶಿರಸಿ: ತಾಲೂಕಿನ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ ಬಸವನಗೌಡ ಭಾನುವಾರ ಮುಂಜಾನೆ ನಿಧನರಾಗಿದ್ದಾರೆ ಎಂಬ ಮಾಹಿತಿ ಬಂದಿದೆ. ಮೂಲತಃ ದಾವಣಗೆರೆಯವರಾದ ಅವರು, ತಮ್ಮ ಸೇವಾ ನಿವೃತ್ತಿಯ ನಂತರದಲ್ಲಿಯೂ ಸಹ ಶಿರಸಿಯ ಸರಕಾರಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಕೆಲವು ತಿಂಗಳುಗಳಿoದ ಕಾರ್ಯ ನಿರ್ವಹಿಸುತ್ತಿದ್ದರು.
ಇತ್ತಿಚೆಗೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ನಂತರದಲ್ಲಿ ಚಿಕಿತ್ಸೆಗಾಗಿ ದಾವಣಗೆರೆಗೆ ತೆರಳಿದ್ದರು. ಕಳೆದೆರಡು ದಿನಗಳಿಂದ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಭಾನುವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಸಾನ್ವಿ ಸ್ಕಿನ್ ಮತ್ತು ಲೇಸರ್ ಸೆಂಟರ್ ನಲ್ಲಿ ಉಚಿತ ಪಿಸಿಯೋಥೆರಪಿ ಶಿಬಿರ
- ಮೇ 21ರ ವರೆಗೆ ರೆಡ್ ಅಲರ್ಟ್ ಘೋಷಣೆ: ಭಾರೀ ಮಳೆಯ ಮುನ್ನೆಚ್ಚರಿಕೆ
- ಮಹಿಳಾ ರಿಸೆಪ್ಯನಿಸ್ಟ್ ಬೇಕಾಗಿದ್ದಾರೆ: ವಸತಿ ಸೌಲಭ್ಯ, ಆಕರ್ಷಕ ಸಂಬಳ
- ನಾಟಿ ವೈದ್ಯ ಬೆಳಂಬಾರದ ಹನುಮಂತಗೌಡರ ಮನೆಯಲ್ಲಿ ಹತ್ತು ಸಾವಿರ ಧನ್ವಂತರಿ ಜಪ, ಹೋಮಹವನ: ಸಮಸ್ತ ಜನರ ಆರೋಗ್ಯ ಸೌಭಾಗ್ಯಕ್ಕೆ ಪ್ರಾರ್ಥನೆ
- ಉಗ್ರರ ದಾಳಿ ಬಳಿಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುತ್ತಿರುವ ವ್ಯಾಪಾರಿಗಳು, ರೈತರು: ವೀಳ್ಯದೆಲೆ ರಪ್ತು ಮಾಡುವುದಿಲ್ಲ ಎಂದ ಬೆಳೆಗಾರರು