ಅಂಗಡಿಯ ಶಟರ್ಸ್ ಕೀ ಹಾಕುವಷ್ಟರಲ್ಲಿ ಕಳ್ಳರ ಕೈಚಳಕ : ಹಣವಿದ್ದ ಬ್ಯಾಗ್ ಎಗರಿಸಿದ ದುಷ್ಕರ್ಮಿಗಳು
ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸರು

ಕುಮಟಾ: ಪಟ್ಟಣದ ಗಿಬ್ ಹೈಸ್ಕೂಲ್ ಸರ್ಕಲ್ ಬಳಿಯ ಹುಲಿದೇವಾ ಕಾಂಪ್ಲೆಕ್ಸ್ ಎದುರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಣ್ಣೆ ಏಜೆನ್ಸಿಯ ಮುಖ್ಯಸ್ಥರಾದ ಶಶಿಕಾಂತ ಹನುಮಂತ ನಾಯಕ ಬೆಣ್ಣೆ ಅವರ ಹಣದ ಚೀಲವನ್ನು ಕಳ್ಳರು ಹೊತ್ತೊಯ್ದ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಸಮಯದಲ್ಲಿ ಬೆಣ್ಣೆ ಏಜೆನ್ಸಿಯ ಶಶಿಕಾಂತ ನಾಯಕ ಬೆಣ್ಣೆ ಎನ್ನುವವರು ತಮ್ಮ ಹಣದ ಕಲೆಕ್ಷನ್ ಇದ್ದ ಬ್ಯಾಗನ್ನು ತನ್ನ ಬೈಕ್ ಹ್ಯಾಂಡಲ್ಲಿಗೆ ಸಿಲುಕಿಸಿ ಶಟರ್ಸ್ ಕೀ ಹಾಕಬೇಕು ಎನ್ನುವಷ್ಟರಲ್ಲಿ ಕಳ್ಳರು ಹಣದ ಚೀಲ ಎಗರಿಸಿ ಬೈಕಿನಲ್ಲಿ ಪರಾರಿಯಾಗಿದ್ದಾರೆ.
- ಅಂಗಡಿಯ ಶಟರ್ಸ್ ಕೀ ಹಾಕುವಷ್ಟರಲ್ಲಿ ಕಳ್ಳರ ಕೈಚಳಕ
- ಹಣವಿದ್ದ ಬ್ಯಾಗ್ ಎಗರಿಸಿ ಬೈಕಿನಲ್ಲಿ ಪರಾರಿ
- ಆರೋಪಿಗಳಿಗಾಗಿ ಬಲೆ ಬೀಸಿದ ಕುಮಟಾ ಪೊಲೀಸರು
- ಬ್ಯಾಗಿನಲ್ಲಿತ್ತು 2 ಲಕ್ಷದ 57 ಸಾವಿರ ರೂಪಾಯಿ
ಇದನ್ನೂ ಓದಿ: Job News: ಉಷಾ ಜಾಬ್ ಲಿಂಕ್ಸ್ & ಮ್ಯಾರೇಜ್ ಬ್ಯೂರೋದಲ್ಲಿ ನೇಮಕಾತಿ
ಆ ಹಣದ ಚೀಲದಲ್ಲಿ 2 ಲಕ್ಷದ 57 ಸಾವಿರ ರೂಪಾಯಿ ಮತ್ತು ಒಂದು ಮೊಬೈಲ್ ಫೋನ್ ಕೂಡಾ ಇತ್ತು. ಈ ಕುರಿತು ಶಶಿಕಾಂತ ಹನುಮಂತ ನಾಯಕ ಬೆಣ್ಣೆ ಅವರು ಕುಮಟಾ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕುಮಟಾ ಪಿಎಸ್‌ಐ ಮಯೂರ ಪಟ್ಟಣ ಶೆಟ್ಟಿ ತನಿಖೆ ಕೈಗೊಂಡಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದು, ಶೀಘ್ರವೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಸ್ಮಯ ನ್ಯೂಸ್, ದೀಪೇಶ್ ನಾಯ್ಕ, ಕುಮಟಾ