Important
Trending

ಬೆಟ್ಟಿಂಗ್ ಭರಾಟೆ ಜೋರು : ಪ್ರತಿ ತಾಲೂಕಿನಲ್ಲಿ ಪೊಲೀಸ್ ಇಲಾಖೆಯಿಂದ ತೀವ್ರ ನಿಗಾ

ಕಾರವಾರ: ಐ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿ ಆರಂಭದೊoದಿಗೆ ಎಲ್ಲೆಡೆಯೂ ಕ್ರಿಕೆಟ್ ಜ್ವರವೂ ಏರಿದೆ.. ಇದೇ ವೇಳೆ ಬೆಟ್ಟಿಂಗ್ ಹಾವಳಿಯೂ ಕಂಡು ಬರುವ ಸಾಧ್ಯತೆ ಇದ್ದು ಇದನ್ನು ತಡೆಯಲು ಮುಂದಾಗಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ , ಬೆಟ್ಟಿಂಗ್ ನಲ್ಲಿ ಪಾಲ್ಗೊಳ್ಳದಂತೆ ಸಾರ್ವಜನಿಕರಿಗೆ ಜಾಗೃತಿ ಸಂದೇಶ ನೀಡಿದೆ.

ಇದನ್ನು ನಿರ್ಲಕ್ಷಿಸಿ ಬೆಟ್ಟಿಂಗ್ ನಲ್ಲಿ ಯಾರಾದರೂ ತೊಡಗಿಕೊಂಡಿದ್ದು ಕಂಡುಬoದಲ್ಲಿ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಸ್ ಪಿ ಎಂ ನಾರಾಯಣ ಎಚ್ಚರಿಕೆ ನೀಡಿದ್ದಾರೆ . ಆಟದ ಹೆಸರಿನಲ್ಲಿ ಕೆಲವರು ಬೆಟ್ಟಿಂಗ್ ಗೀಳಿಗೆ ಬೀಳುವ ಸಾಧ್ಯತೆ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಟ್ಟಿಂಗ್ ನಂತ ಕಾನೂನು ಬಾಹಿರ ಕೃತ್ಯಗಳಲ್ಲಿ ಯಾರೂ ತೊಡಗಿಕೊಳ್ಳಬಾರದು ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಪ್ರಕಟಣೆ ಹೊರಡಿಸಲಾಗಿದೆ.

ಬೆಟ್ಟಿಂಗ್ ನಡೆಯದಂತೆ ಜಿಲ್ಲೆಯ ಪ್ರತಿಯೊಂದು ತಾಲೂಕುಗಳಲ್ಲಿ ಪೊಲೀಸ್ ಇಲಾಖೆ ತೀವ್ರ ನಿಗಾ ವಹಿಸಿದ್ದು ಯಾರೂ ಸಹ ಬೆಟ್ಟಿಂಗ್ ನಲ್ಲಿ ಭಾಗಿಯಾಗದಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಎಂ ನಾರಾಯಣ ಅವರು ತಿಳಿಸಿದ್ದಾರೆ. ಈ ಮೂಲಕ ಕ್ರಿಕೆಟ್ ಒಂದು ಅದ್ಭುತ ಕ್ರೀಡೆ ಹಾಗೂ ಬಾಂಧವ್ಯ ವೃದ್ಧಿಸುವ ಆಟವಾಗಿರಲಿ ಹೊರತು ಬೆಟ್ಟಿಂಗ್ ಗಾಗಿ ಏನೂ ಬೇಕಾದರೂ ಮಾಡಿಯೇನೂ ಎಂಬ ಚಟವಾಗದಿರಲಿ ಎನ್ನುವುದು ಪ್ರಜ್ಞಾವಂತರ ಅನಿಸಿಕೆ ಆಗಿದೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button