Important
Trending

ಬೇಸಿಗೆ ರಜೆ ನಿಮಿತ್ತ 20 ದಿನಗಳ ಸಂಗೀತ ಸಂಸ್ಕಾರ ಶಿಬಿರ

ಕುಮಟಾ: ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಬೇಸಿಗೆ ರಜೆ ನಿಮಿತ್ತ 20 ದಿನಗಳ `ಸಂಗೀತ ಸಂಸ್ಕಾರ ಶಿಬಿರ’ ಏರ್ಪಡಿಸಿದೆ. ಎ. 11 ರಿಂದ ಕತಗಾಲದ ಸತ್ಸಂಗ ಭವನದಲ್ಲಿ ಬೆಳಿಗ್ಗೆ 9 ರಿಂದ 12 ರ ವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಪೂರಕವಾಗುವಂತೆ ಯೋಗ, ಭಗವದ್ಗೀತೆ, ಸ್ತೋತ್ರ, ಸಂಗೀತ, ಸುಭಾಷಿತ, ಕರಕುಶಲ, ಪಂಚಾoಗ ಪರಿಚಯ, ಏಕಪಾತ್ರಾಭಿನಯ ಮುಂತಾದ ವಿಷಯಗಳನ್ನು ಬೋಧಿಸಲಾಗುತ್ತದೆ.

ಸಂಪನ್ಮೂಲ ವ್ಯಕ್ತಿಗಳಿಂದ ಸಂವಾದ ಇರುತ್ತದೆ. ಸಂಸ್ಕಾರ ಶಿಬಿರಕ್ಕಾಗಿ ಮೂರು ಪುಸ್ತಕಗಳನ್ನು ಕಲಾಶ್ರೀ ಸಂಸ್ಥೆ ಪ್ರಕಟಿಸಿದೆ. 4 ರಿಂದ 8 ನೇ ತರಗತಿಯ 30 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ ಎಂದು ಅಧ್ಯಕ್ಷ ಎಚ್.ಎನ್.ಅಂಬಿಗ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಯೋಜಕರಾದ ಡಾ. ಗಣಪತಿ ಭಟ್ಟ ದೂ: 9448232435 ಮಾಸ್ತಿ ಗೌಡ ದೂ: 9480367762 ಇವರನ್ನು ಸಂಪರ್ಕಿಸಬಹುದು.

ವಿಸ್ಮಯ ನ್ಯೂಸ್, ಕುಮಟಾ

Back to top button