
ಅಂಕೋಲಾ: ಮನೆಯೊಳಗೆ ಬಂದು ಕೇರಂ ಬೋರ್ಡ್ ಬಳಿ ಅವಿತಿದ್ದ ನಾಗರ ಹಾವನ್ನು ಹಿಡಿದು ಸಂರಕ್ಷಿಸುವ ಮೂಲಕ ಅವರ್ಸಾದ ಮಹೇಶ ನಾಯಕ , ಗಾಂವಕರ ಕುಟುಂಬಸ್ಥರ ಆತಂಕ ದೂರವಾಡಿದ್ದಾರೆ ಅಂಕೋಲಾ ತಾಲೂಕಿನ ಪುಜಗೇರಿಯಲ್ಲಿ ಮಂಜಗುಣಿ – ಅಂಕೋಲಾ ಮುಖ್ಯ ರಸ್ತೆಗೆ ಹೊಂದಿಕೊoಡಿರುವ, ಗಾಂವಕರ ಮನೆತನದ ಕೂಡು ಕುಟುಂಬದ ಮನೆಯೊಂದರಲ್ಲಿ ಎಲ್ಲಿಂದಲೋ ಬಂದಿದ್ದ ನಾಗರ ಹಾವೊಂದು ಕಾಣುಸಿಕೊಂಡು ಮನೆಯವರಲ್ಲಿ ಆತಂಕ ಸೃಷ್ಟಿಸಿತ್ತು.
ಮನೆಯಲ್ಲಿ ಹಾವು ಇರುವ ವಿಚಾರವನ್ನು ಸ್ಥಳೀಯ ಪ್ರಮುಖರಾದ ರವಿ ಗಾಂವಕರ ಮತ್ತು ರತ್ನಾಕರ ಗಾಂವಕರ ಎನ್ನುವವರು ತಮ್ಮ ಅಪ್ತರ ಮೂಲಕ ಕರೆ ಮಾಡಿಸಿ ಉರಗ ಸಂರಕ್ಷಕ ಅವರ್ಸಾದ ಮಹೇಶ ನಾಯ್ಕರಿಗೆ ವಿಷಯ ತಲುಪಿಸಿದ್ದಾರೆ. ಕೂಡಲೇ ಮಹೇಶ ನಾಯ್ಕ ಪೂಜಗೇರಿಗೆ ಬಂದು ಆ ಮನೆ ಒಳಗೆ ಪ್ರವೇಶಿಸಿ ಸ್ಥಳ ಪರಿಶೀಲಿಸಿದ್ದಾರೆ. ನಾಗರ ಹಾವು ಕೇರಂ ಬೋರ್ಡ್ ನ ಹಿಂಬದಿ ಅವಿತಿರುವುದು ಗಮನಕ್ಕೆ ಬಂದು ನಿಧಾನವಾಗಿ ಕೇರಂ ಬೋರ್ಡ್ ಪಕ್ಕಕ್ಕೆ ಸರಿಸುತ್ತಿದ್ದಂತೆ ಕೊಂಚ ಪಕ್ಕಕ್ಕೆ ಸರಿದ ನಾಗರ ಹಾವು ಅಲ್ಲಿಂದಲೇ ಹೆಡೆ ಎತ್ತಿ ಬುಸ್ ಗುಡಲು ಆರಂಭಿಸಿದೆ.
ಚಾಕಚಕ್ಯತೆಯಿಂದ ಆ ಹಾವನ್ನು ಹಿಡಿದ ಮಹೇಶ ನಾಯ್ಕ ನಿಧಾನವಾಗಿ ಅದನ್ನು ಮನೆಯ ಹೊರಗೆ ತಂದು ಬಳಿಕ ತಾವು ತಂದಿದ್ದ ಚೀಲದಲ್ಲಿ ಅದು ಒಳ ಸೇರುವಂತೆ ತಮ್ಮ ಅನುಭವ ತೋರ್ಪಡಿಸಿ , ಗಾಂವಕರ ಕುಟುಂಬಸ್ಥರ ಆತಂಕ ದೂರ ಮಾಡಿದ್ದಾರೆ. ವಿಶ್ರಾಂತ ಶಿಕ್ಷಕ ಗಣಪತಿ ಗಾಂವಕರ , ವ್ಯವಹಾರಸ್ಥ ಚಂದ್ರು ಗಾಂವಕರ , ಪ್ರಮುಖರಾದ ರತ್ನಾಕರ , ರವಿ ಹಾಗೂ ಗಾಂವಕರ ಕುಟುಂಬದ ಮಹಿಳಾ ಸದಸ್ಯರು ನಾಗರ ಹಾವು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದಲ್ಲದೇ , ಮಹೇಶ ನಾಯ್ಕ ಅವರ ಸೇವೆಗೆ ಕೃತಜ್ಞತೆ ಸೂಚಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ