
ಭಟ್ಕಳ: ತಾಲೂಕಿನ ತೆರ್ನಮಕ್ಕಿ ಹತ್ತಿರ ಗಾಲ್ಪ್ ಸಂಪರ್ಕಿಸುವ ರಸ್ತೆಯಲ್ಲಿ ಕೋಳಿ ಅಂಕದ ಅಡ್ಡೆಯ ಮೇಲೆ ಮುರುಡೇಶ್ವರ ಠಾಣೆಯ ಪೋಲಿಸರು ದಾಳಿ ನಡೆಸಿ 6 ಜನ ಆರೋಪಿಯನ್ನು ಬಂಧಿಸಿದ್ದಾರೆ.
ಬಂದಿತ ಆರೋಪಿಗಳು ಗಾಲ್ಪ್ ಸಂಪರ್ಕಿಸುವ ರಸ್ತೆಯ ಬಯಲು ಪ್ರದೇಶದಲ್ಲಿ ಸಂಜೆ 3:30 ರ ಸುಮಾರಿಗೆ ಕೋಳಿಯ ಮೇಲೆ ಹಣವನ್ನು ಪಂಥ ಕಟ್ಟಿ ಜೂಜಾಡಲು ಬಂದಾಗ ಪಿಎಸ್ಐ ಹಣಮಂತ ಬಿರಾದರ ತಮ್ಮ ಸಿಬ್ಬಂಧಿಗಳೊಂದಿಗೆ ದಾಳಿ ನಡೆಸಿ ಕೋಳಿ ಹಾಗೂ ಹಣವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ನಾಗರಾಜ ನಾಯ್ಕ (35), ಹೇಮಚಂದ್ರ (42), ರೋಹಿದಾಸ ನಾಯ್ಕ (35), ಮಾದೇವ ಬಾಕಡ್ (46), ಶಿವರಾಮ ದೇವಾಡಿಗ (48), ಶರತ ನಾಯ್ಕ (22) ಬಂಧಿತ ಆರೋಪಿಯಾಗಿದ್ದಾರೆ.
ವಿಸ್ಮಯ ನ್ಯೂಸ್ ಭಟ್ಕಳ