ಕಾಲೇಜ್ ಫಂಕ್ಷನ್ ಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದ 19ರ ಯುವತಿ ಕಾಣೆ ? ನೊಂದ ತಂದೆ ನೀಡಿದ ದೂರು ಮತ್ತು ಪೊಲೀಸ್ ಪ್ರಕಟಣೆಯಲ್ಲಿ ಏನಿದೆ ?

ಅಂಕೋಲಾ : 19ರ ಹರೆಯದ ಯುವತಿಯೋರ್ವಳು ಕಾಲೇಜಿನಲ್ಲಿ ಫಂಕ್ಷನ್ ಇದೆ ಎಂದು ಹೇಳಿ ಮನೆಯಿಂದ ಹೋದವಳು , ಮನೆಗೆ ಮರಳಿ ಬಾರದಿರುವುದರಿಂದ , ನೊಂದ ತಂದೆ, ಕಾಣೆಯಾದ ತನ್ನ ಮಗಳನ್ನು ಹುಡುಕಿಕೊಡುವಂತೆ ಪೊಲೀಸ್ ದೂರು ನೀಡಿದ್ದಾರೆ.
ತಾಲೂಕಿನ ಬಳಲೆ ನಿವಾಸಿ ರಾಜೇಶ ನಾಗಪ್ಪ ಹಳ್ಳೇರ ಲ ದೂರಿನಲ್ಲಿ ತಿಳಿಸಿದಂತೆ, ವಿದ್ಯಾರ್ಥಿನಿ ಆಗಿರುವ ತನ್ನ ಮಗಳು ರಕ್ಷಿತಾ ಹಳ್ಳೇರ (19 ), ಇವಳು ದಿ 12-04 – 25 ರಂದು ಬೆಳಿಗ್ಗೆ 9.00 ಘಂಟೆ ಸುಮಾರಿಗೆ ,ಬಳಲೆಯ ತನ್ನ ಮನೆಯಿಂದ ಕಾಲೇಜ್ ಫಂಕ್ಷನ್ ಇದೆ ಎಂದು ಮನೆಯಲ್ಲಿ ಹೇಳಿ ಹೋದವಳು ಈ ವರೆಗೂ ಮನೆಗೆ ಬಾರದೇ, ತನ್ನ ಇರುವಿಕೆ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೇ , ಎಲ್ಲಿಯೋ ಹೋಗಿ ಕಾಣೆಯಾದ ತನ್ನ ಮಗಳಿಗೆ, ಪರಿಚಯಸ್ಥರಲ್ಲಿ , ಊರಲ್ಲಿ , ಸಂಬಂಧಿಕರಲ್ಲಿ ವಿಚಾರಿಸಿದರೂ, ತನ್ನ ಮಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದ್ದರಿಂದ , ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಅಂತಾ ಎಂಬಿತ್ಯಾದಿ ಅಂಶಗಳಿದೆ.
5 ಪೂಟ್ ಎತ್ತರದ , ಕನ್ನಡ , ಕೊಂಕಣಿ , ಹಿಂದಿ, ಭಾಷಾ ಜ್ಞಾನವಿರುವ , ಗೋದಿ ಮೈಬಣ್ಣ , ಗೋಲು ಮುಖ , ಸಾಧಾರಣ ಮೈಕಟ್ಟು. ಕಪ್ಪು ತಲೆ ಕೂದಲು ಹೊಂದಿರುವ ರಕ್ಷಿತಾ ಇವಳು ಮನೆಯಿಂದ ಹೋಗುವಾಗ ಹಸಿರು ಬಣ್ಣದ ಗೌನ್ , ಕಪ್ಪು ಬಣ್ಣದ ಬಟ್ಟೆ ಧರಿಸಿದ್ದು ಈ ಮೇಲಿನ ಚಹರೆ ಗುರುತಿರುವ ಯುವತಿ ಎಲ್ಲಿಯಾದರೂ ಕಂಡು ಬಂದರೆ ಇಲ್ಲವೇ ಕಾಣೆಯಾದವರ ಬಗ್ಗೆ ಮಾಹಿತಿ ಕಂಡು ಬಂದರೆ ಅಂಕೋಲಾ ಪೊಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ. ಅಂಕೋಲಾ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08388 – 230333 , ಮೊಬೈಲ್ ಸಂಖ್ಯೆ 9480805250 ಇಲ್ಲವೇ 9480805268 ನಂಬರಿಗೆ ಇಲ್ಲವೇ ತಮಗೆ ಹತ್ತಿರದ ಯಾವುದೇ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸುವಂತೆ ಪೊಲೀಸ್ ಪ್ರಕಟಣೆಯಲ್ಲಿ ಕೋರಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ