
ಭಟ್ಕಳ: ತಾಲೂಕಿನ ಕೊಣಾರ ಗ್ರಾಮದ ಹಿ. ಪ್ರಾ. ಶಾಲೆ ಹಡೀಲ್‌ನಲ್ಲಿ ನಡೆಯುತ್ತಿರುವ 7 ದಿನಗಳ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಐದನೇ ದಿನದ ಉಪನ್ಯಾಸ ಕಾರ್ಯಕ್ರಮವು ಏಪ್ರಿಲ್ 7 ರಂದು ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಗ್ರಾಮೀಣ ಪೊಲೀಸ್ ಠಾಣೆ, ಭಟ್ಕಳದ ಪಿ.ಎಸ್.ಐ. ರನ್ನೆಗೌಡ ಪಾಟೀಲ್ ಅವರು ಆಗಮಿಸಿ, ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆ” ಎಂಬ ಮಹತ್ವದ ವಿಷಯದ ಕುರಿತು ಮನೋಜ್ಞವಾದ ಶೈಲಿಯಲ್ಲಿ ಉಪನ್ಯಾಸ ನೀಡಿದರು. ಸಾಮಾಜಿಕ ಜಾಲತಾಣಗಳ ಉಪಯೋಗ ಹಾಗೂ ಅಪಾಯಗಳ ಬಗ್ಗೆ ಅರಿವು ಮೂಡಿಸಿ. ವಿದ್ಯಾರ್ಥಿಗಳಿಗೆ ಜಾಗೃತಿ ಹಾಗೂ ಜವಾಬ್ದಾರಿ ಬೆಳೆಸುವ ನಿಟ್ಟಿನಲ್ಲಿ ಅವರು ನೀಡಿದ ಉಪನ್ಯಾಸ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಪ್ರಾಂಶುಪಾಲರಾದ ಪ್ರೊ. ಮೊಹಮ್ಮದ್ ಹಿಬ್ಬಾನ್ ವಹಿಸಿದ್ದರು. ಅವರು ಸಾಮಾಜಿಕ ಜಾಲತಾಣಗಳ ಶಿಸ್ತಿನ ಬಳಕೆಯ ಅವಶ್ಯಕತೆಯನ್ನು ತಮ್ಮ ವಿಶ್ಲೇಷಣಾತ್ಮಕ ಭಾಷಣದಲ್ಲಿ ವಿವರಿಸಿದರು. ಕಾರ್ಯಕ್ರಮದಲ್ಲಿ ಪ್ರೊ. ಎಸ್. ಎ. ಇಂಡಿಕರ್ ಐ.ಕ್ಯೂ.ಎ.ಸಿ. ಸಂಯೋಜಕರು,ಪ್ರೊ. ಆರ್. ಎಸ್. ನಾಯ್ಕ, ಕನ್ನಡ ವಿಭಾಗದ ಮುಖ್ಯಸ್ಥರು, ಕುಳ್ಳಿ ಅಣ್ಣಪ್ಪ ಗೊಂಡ, ಸದಸ್ಯರು, ಗ್ರಾಮ ಪಂಚಾಯತ್, ಕೊಣಾರ, ಅಸೀಲ್ ಸಾಬಂದ್ರಿ, ಹಳೆಯ ವಿದ್ಯಾರ್ಥಿ ಕವಿತಾ ನಾಯ್ಕ, ಶಿಕ್ಷಕಿ, ಹಿ. ಪ್ರಾ. ಶಾಲೆ, ಹಡೀಲ್, ಪ್ರೊ. ದಾಮೋದರ ನಾಯ್ಕ, ಎನ್.ಎಸ್.ಎಸ್. ಅಧಿಕಾರಿ ಮತ್ತಿತರರು ಇದ್ದರು. ವಿದ್ಯಾರ್ಥಿನಿಯರಾದ ಆಯಿಸಾ ಮತ್ತು ಸಾನಿಯಾ ಕಾರ್ಯಕ್ರಮ ನಿರೂಪಿಸಿದರು.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ