
ಶಿರಸಿ: ಮದುವೆಗೆ ಹೋಗಿ ಬರುವೆ ಎಂದು ತನ್ನ ಇಬ್ಬರು ಮಕ್ಕಳ ಜೊತೆ ಕಾಣೆಯಾಗಿರುವ ಮಹಿಳೆ ಕುರಿತು ಆಕೆಯ ಪತಿ ಶಿರಸಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 32 ವರ್ಷದ ಜ್ಯೋತಿ ಹನುಮಂತಪ್ಪ ಭೋವಿ ವಡ್ಡರ ಮದುವೆಗೆ ಹೋಗಿಬರುತ್ತೇನೆ ಎಂದು ತನ್ನ 13 ವಯಸ್ಸಿನ ಮಗ, 10 ವರ್ಷದ ಮಗಳೊಂದಿಗೆ ಶಿರಸಿ ಮಾರುತಿ ಗಲ್ಲಿಯ ತನ್ನ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ.
ಮದುವೆಗೂ ಹೋಗದೆ, ಮನೆಗೂ ಬಾರದೆ ಇರುವ ಕುರಿತು ಆಕೆಯ ಪತಿ ಹನುಮಂತಪ್ಪ ಭೋವಿವಡ್ಡರ ನಗರ ಠಾಣೆಗೆ ದೂರು ದಾಖಲಿಸಿದ್ದಾರೆ. ಮಹಿಳೆ ಗೋಧಿ ವರ್ಣ, ಕೋಲು ಮುಖ ಹೊಂದಿದ್ದು ಕನ್ನಡ, ತೆಲಗು ಭಾಷೆ ಮಾತನಾಡುತ್ತಾಳೆ. ಮಹಿಳೆ ಮತ್ತು ಮಕ್ಕಳು ಕಂಡು ಬಂದಲ್ಲಿ ನಗರ ಠಾಣೆಗೆ ತಿಳಿಸಬೇಕೆಂದು ಕೋರಲಾಗಿದೆ.
ವಿಸ್ಮಯ ನ್ಯೂಸ್, ಶಿರಸಿ