
ಹೊನ್ನಾವರ: ಮಂಗನಖಾಯಲೆಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೇ ಹೊನ್ನಾವರ ತಾಲೂಕಿನ ಚಿಕ್ಕನಕೋಡ ಮೂಲದ ವ್ಯಕ್ತಿಯೋರ್ವರು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತಾಲೂಕಿನ ಚಿಕ್ಕನಕೋಡ ನಿವಾಸಿ ತಿಮ್ಮಯ್ಯ ಹೆಗಡೆ ಎನ್ನುವವರೇ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ಕಳೆದ ಕೆಲದಿನಗಳಿಂದ ಜ್ವರದಿಂದ ಬಳಲುತ್ತಿದ್ದು ತಪಾಸಣೆ ನಡೆಸಿದಾಗ ಮಂಗನ ಖಾಯಿಲೆ ದೃಢಪಟ್ಟಿತ್ತು. ಕೋಮಾ ಸ್ಥಿತಿ ತಲುಪಿದ ಇವರನ್ನು ಹೊನ್ನಾವರ ತಾಲೂಕ ಆಸ್ಪತ್ರೆಯಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ. ಆ ಮೂಲಕ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಮಂಗನ ಖಾಯಿಲೆಯಿಂದ ತಾಲೂಕಿನಲ್ಲಿ ಪ್ರಥಮ ಸಾವು ಸಂಭವಿಸಿದoತಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್