
ಕುಮಟಾ : ತಾಲೂಕಿನ ಪ್ರಸಿದ್ದ ಚರ್ಮ ವೈದ್ಯರಾದ ಡಾ. ವಿಶ್ವಾಸ ನಾಯ್ಕ ಹಾಗೂ ಡಾ. ಸಂತೋಷಿ ನಾಯ್ಕ ಅವರು ತಮ್ಮ ಸಾನ್ವಿ ಸ್ಕಿನ್ ಕೇರ್ ಮತ್ತು ಲೇಸರ್ ಸೆಂಟರ್ ಅನ್ನು ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿರುವ ವಿನಾಯಕ ಕಾಂಪ್ಲೆಕ್ಸ್ ನಲ್ಲಿ ಆರಂಭಿಸಿದ್ದಾರೆ. ಕಳೆದ ಐದಾರು ವರ್ಷಗಳಿಂದ ಕುಮಟಾದ ಜನತೆಗೆ ವಿವಿಧ ಚರ್ಮರೋಗದ ಚಿಕಿತ್ಸೆ ಹಾಗೂ ಸಲಹೆಗಳನ್ನು ನೀಡುತ್ತಾ ಬಂದಿದ್ದಾರೆ.
ಇದೀಗ ಬರುವ ಮೇ 25 ರ ಭಾನುವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಉಚಿತ ಪಿಸಿಯೋಥೆರಪಿ ಶಿಬಿರವನ್ನು ಸಾನ್ವಿ ಸ್ಕಿನ್ ಮತ್ತು ಲೇಸರ್ ಸೆಂಟರ್ ನಲ್ಲಿ ಆಯೋಜನೆ ಮಾಡಲಾಗಿದೆ. ಬೆನ್ನು ನೋವು, ಕಾಲು ನೋವು, ಸೊಂಟ ನೋವು, ಭುಜ ಹಾಗು ದೇಹದ ಇನ್ನತರ ಭಾಗದಲ್ಲಿ ನೋವು, ಸೈಯಾಟಿಕ ಮತ್ತು ನರಗಳ ಸಂಬoಧಿತ ಸಮಸ್ಯೆಗಳಿಗೆ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ. ಮುಂಚಿತ ನೋಂದಣಿಗಾಗಿ 9481811798 ಈ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.
ವಿಸ್ಮಯ ನ್ಯೂಸ್, ಕುಮಟಾ