
ಭಟ್ಕಳ: ಕಳ್ಳತನಕ್ಕೆ ಯತ್ನಿಸಿ ಹೊಂಚು ಹಾಕಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ ಘಟನೆ ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಸ್ತಿಮಕ್ಕಿಯ ನಿವಾಸಿ ವಿಶ್ವೇಶ್ವರ ಮಾಸ್ತಿ ಮೊಗೇರ ಕಳ್ಳತನಕ್ಕೆ ಯತ್ನಿಸಿ ಬಂಧಿತನಾದ ಆರೋಪಿಯಾಗಿದ್ದಾನೆ. ಮೇ.22ರಂದು ರಾತ್ರಿ 11 ಗಂಟೆಯಿoದ 23ರ ಬೆಳಗಿನಜಾವ 3 ಗಂಟೆಯ ಮಧ್ಯದಲ್ಲಿ ಯಾರೋ ತಮ್ಮ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುವ ಉದ್ದೇಶದಿಂದ ಮನೆಯ ಹತ್ತಿರ ಬಂದಿರುವ ಬಗ್ಗೆ ಬಸ್ತಿಯ ನಿವಾಸಿ ಮದನ ಸುಕ್ರ ನಾಯ್ಕ ಇವರು ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಆಧಾರದ ಮೇಲೆ ತನಿಖೆಯನ್ನು ಕೈಗೊಂಡ ಸಬ್ ಇನ್ಸಪೆಕ್ಟರ್ ಹಣಮಂತ ಬೀರಾದಾರ ಸಿ.ಸಿ.ಟಿ.ವಿ.ಯಲ್ಲಿ ಸೆರೆಯಾದ ಆರೋಪಿಯ ಚಹರೆಯನ್ನು ಆಧರಿಸಿ ಆರೋಪಿತನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮಂಜುನಾಥ ಮಡಿವಾಳ, ಗಜಾನನ ನಾಯ್ಕ ಮುಂತಾದವರು ಭಾಗವಹಿಸಿದ್ದರು. ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿರುವುದನ್ನು ಉ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ