Join Our

WhatsApp Group
Big News
Trending

ಕಳೆದ ಆರೇಳು ವರ್ಷಗಳಿಂದ ಬಾಡಿಗೆ ನೀಡದ ಅಂಗಡಿ ಮಾಲೀಕರಿಗೆ ಶಾಕ್: ಅಂಗಡಿ ಸೀಜ್

ಕುಮಟಾ: ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ 92 ವಾಣಿಜ್ಯ ಮಳಿಗೆಗಳಿದ್ದು ಸುಮಾರು 75 ರಿಂದ 80 ಮಳಿಗೆಗಳನ್ನು ಬಾಡಿಗಗೆ ನೀಡಲಾಗಿದೆ. ಅದರಲ್ಲಿ 6 ಮಳಿಗೆಗಳ ಮಾಲೀಕರಿಗೆ ಹಲವಾರು ಬಾರಿ ತಿಳಿಸಿದರೂ ಸಹ 2018-19ನೇ ಸಾಲಿನಿಂದ ಬಾಡಿಗೆಯ ಬಾಕಿ ಮೊತ್ತದ ಹಣ ಚುಕ್ತ ಪಡಿಸದೇ ಹಾಗೇ ಇರಿಸಿದ್ದರಿಂದ ಇಂದು ಪುರಸಭಾ ಮುಖ್ಯಾಧಿಕಾರಿ,ಕಂದಾಯ ಅಧಿಕಾರಿ ಹಾಗೂ ವಸೂಲಿ ಸಹಾಯಕರು ಸೇರಿ ಅಂಗಡಿಗಳನ್ನು ಮುಚ್ಚಿ, ಸೀಜ್ ಮಾಡಿ ಬಾಡಿಗೆ ವಸೂಲಿಗೆ ಕ್ರಮ ಕೈಗೊಂಡಿದ್ದಾರೆ.

ಈ ಕುರಿತು ವಿಸ್ಮಯ ವಾಹಿನಿಯೊಂದಿಗೆ ಪುರಸಭೆ ಮುಖ್ಯಾಧಿಕಾರಿ ವಿಧ್ಯಾದರ ಕಲಾದಗಿ ಮಾತನಾಡಿ,ಈ ಆರು ಮಳಿಗೆಗಳಿಂದ ಅಂದಾಜು ಸುಮಾರು 30 ಲಕ್ಷ ಬಾಡಿಗೆ ಹಣ ಬಾಕಿ ಇದೆ. ಆದ್ದರಿಂದ ಈ ಮಳಿಗೆಗಳನ್ನ ಪುರಸಭೆಯಿಂದ ಅಧಿಕೃತವಾಗಿ ಸೀಜ್ ಮಾಡಲಾಗಿದೆ. ಇವರು ಈ ಬಾಕಿ ಮೊತ್ತವನ್ನು ಪಾವತಿಸಿದರೆ ನಿಯಮಾನುಸಾರ ಮಳಿಗೆಗಳನ್ನು ಮರಳಿ ಬಾಡಿಗೆಗೆ ನೀಡುತ್ತೇವೆ. ಇಲ್ಲಾವಾದಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮದ ಪ್ರಕಾರ ಬಾಕಿ ವಸೂಲಿಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸೀಲ್ ಮಾಡಿದ ಅಂಗಡಿಯನ್ನು ಪರವಾನಿಗೆ ಇಲ್ಲದೇ ಒಳ ಪ್ರವೇಶಿಸಿದಲ್ಲಿ ನಿಯಮಾನುಸಾರ ಅಂಗಡಿ ಮಳಿಗೆದಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಪುರಸಭೆ ತಿಳಿಸಿದೆ.

ವಿಸ್ಮಯ ನ್ಯೂಸ್ ದಿಪೇಶ ನಾಯ್ಕ ಕುಮಟಾ

Back to top button