Join Our

WhatsApp Group
Important
Trending

ಭಾರೀ ಮಳೆ ಮುನ್ಸೂಚನೆ: ಅಂಗನವಾಡಿಗಳಿಗೆ ರಜೆ: ಶಾಲಾ, ಕಾಲೇಜುಗಳಿಗೆ ರಜೆ ಇದ್ಯಾ, ಇಲ್ವಾ? ನೋಡಿ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಕುರಿತು ಶೈಕ್ಷಣಿಕ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಉತ್ತರ ಕನ್ನಡ ಕಾರವಾರ ಶೈಕ್ಷಣಿಕ ಜಿಲ್ಲೆಯಾಧ್ಯಂತ ವ್ಯಾಪಕವಾಗಿ ಮಳೆ ಬೀಳುತ್ತಿರುವುದರಿಂದ ಹವಾಮಾನ ಇಲಾಖೆಯಿಂದ ಕರಾವಳಿ ಪ್ರದೇಶದಲ್ಲಿ ರೆಡ್ ಅಲರ್ಟ ಘೋಷಣೆ ಮಾಡಲಾಗಿದ್ದು, ಶಾಲೆಗಳಿಗೆ ರಜೆ ಘೋಷಿಸಲು ಉಲ್ಲೇಖಿತ (2) ರಲ್ಲಿ ಈ ಕಚೇರಿಯಿಂದ ಮಾಹಿತಿ ನೀಡಲು ತಿಳಿಸಿದ ಪ್ರಕಾರ ನಾಳೆ ದಿನಾಂಕ: 29/05/2025 ರಂದು 2025-26 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುವಾಗುವಂತೆ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಶಾಲೆಗಳಿಗೆ ಹಾಜರಾಗಿ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲು ಹಾಗೂ ದಿನಾಂಕ: 30/05/2025 ರಿಂದ ಶಾಲೆಗಳನ್ನು ಪ್ರಾರಂಭಿಸಲು ಸೂಚಿಸಿರುತ್ತಾರೆ.

ಈ ಪ್ರಯುಕ್ತ ನಾಳೆ ದಿನದಂದು ಶಾಲೆಗಳಿಗೆ ವಿದ್ಯಾರ್ಥಿಗಳು ಬಾರದೇ ಇರುವುದರಿಂದ ಶಾಲೆಗಳಿಗೆ ರಜೆ ಘೋಷಿಸುವುದು ಅಗತ್ಯವಿರುವುದಿಲ್ಲವೆಂಬ ವಿಷಯದ ಮಾಹಿತಿಯನ್ನು ಗೌರವ ಪೂರ್ವಕವಾಗಿ ಮಾನ್ಯರ ಅವಗಾಹನೆಗೆ ತರ ಬಯಸುತ್ತೇನೆ ಎಂದು ಶೈಕ್ಷಣಿಕ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ವಿಸ್ಮಯ ನ್ಯೂಸ್ ಕಾರವಾರ

Back to top button