ಜೂನ್ 10 ರಂದು ಹೊನ್ನೆಬೈಲ್ ಹಬ್ಬ: ಮಳೆ ಕಾರಣದಿಂದ ಹಬ್ಬದಾಚರಣೆಯಲ್ಲಿ ಸ್ವಲ್ಪ ಮಾರ್ಪಾಡು: ಭಕ್ತರ ಹರಕೆ ಸೇವೆಗೆ ಇದೆ ಅವಕಾಶ

ಅಂಕೋಲಾ: ಹೊನ್ನೆಬೈಲ್ ಗ್ರಾಮ ದೇವರುಗಳಾದ ಶ್ರೀಬೊಮ್ಮಯ್ಯ ದೇವರು, ಶ್ರೀಕುಸ್ಲೆ ದೇವರು ಮತ್ತು ಶ್ರೀಮಾಣಿಬೀರ ದೇವರುಗಳ ಬಂಡಿಹಬ್ಬಕ್ಕೆ ಪೂರಕವಾದ ವಿಶೇಷ ಹಬ್ಬ ಜೂನ್ 10 ರ ಮಂಗಳವಾರ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತ್ಯಂತ ವಿಜೃಂಭಣೆಯಿoದ ನಡೆಯಲಿದೆ.
ಕಾರಣಾಂತರಗಳಿoದ ಎಪ್ರಿಲ್ ಮೇ ಒಳಗಡೆ ನಡೆಸಬೇಕಿದ ಈ ವರ್ಷದ ಬಂಡಿಹಬ್ಬದ ಆಚರಣೆ ಸ್ವಲ್ಪ ವಿಳಂಬವಾಗಿ ಇದೀಗ ಜೂನ್ 10 ಕ್ಕೆ ನಡೆಸುವಂತಾಗಿದೆ. ಈ ವೇಳೆ ಮಳೆಯ ಸಾಧ್ಯತೆ ಹೆಚ್ಚಿರುವುದರಿಂದ ಆಚರಣೆಗೆ ತೊಡಕಾಗದಂತೆ , ಕಳಸ ಮೆರವಣಿಗೆ ಹೊರತಾಗಿ ಇತರೆ ಧಾರ್ಮಿಕ – ಸಾಂಪ್ರದಾಯಿಕ ಅಚರಣೆ ಮಾಡಿ ಗುನಗರು , ಕಟ್ಟಿಗೆದಾರರು ಸೇರಿದಂತೆ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಹಬ್ಬದಾಚರಣೆಗೆ ಸಂಬoಧಿತ ಪ್ರಮುಖರು ಮತ್ತು ಊರ ನಾಗರಿಕರ ಹಾಗೂ ಸರ್ವ ಸದ್ಭಕ್ತರ ಸಹಕಾರದಲ್ಲಿ ನಡೆಸಲು ನಿರ್ಧರಿಸಿದ್ದು, ಈ ವಿಶೇಷ ಹಬ್ಬದಾಚರಣೆ ಯಶಸ್ಸಿಗೆ ಎಲ್ಲರೂ ಕೈ ಜೋಡಿಸಿ ಶ್ರೀ ದೇವರುಗಳ ಕೃಪೆಗೆ ಪಾತ್ರರಾಗುವಂತೆ ವಿನಂತಿಸಿರುವ ಹೊನ್ನೆಬೈಲ್ ಟೆಂಪಲ್ ಟ್ರಸ್ಟಿಗಳಾದ ಬೆಳಂಬಾರದ ಹನುಮಂತ ಬೊಮ್ಮು ಗೌಡ , ಹಬ್ಬದಾಚರಣೆ ಯಶಸ್ಸಿಗೆ ಸರ್ವರ ಸಹಕಾರ ಕೋರಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ