ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಕೇಣಿಯಲ್ಲಿ ಸರ್ವಋತು ಆಳ ಸಮುದ್ರ ಗ್ರೀನ್‌ಫೀಲ್ಡ್ ಬಂದರಿನ ಅಭಿವೃದ್ಧಿ
ಸಾರ್ವಜನಿಕರ ಮಾಹಿತಿಗಾಗಿ

- ಇದು ಕೇವಲ ಬಂದರು ವಿಕಾಸವಲ್ಲ
- ಸಮುದಾಯ ಅಭಿವೃದ್ಧಿಗೆ ದಾರಿ
- ಈ ಯೋಜನೆಯಿಂದ ಪ್ರಯೋಜನ ಏನು?
- ಉದ್ಯೋಗ, ಪ್ರವಾಸೋದ್ಯಮ ಚಟುವಟಿಕೆಗೆ ಪೂರಕ
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ಗ್ರೀನ್‌ಫೀಲ್ಡ್ ಸರ್ವಋತು ಬಂದರು ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಸದರಿ ಬಂದರನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿಯಲ್ಲಿ ಅಭಿವೃದ್ಧಿಪಡಿಸಲು ಕರ್ನಾಟಕ ಜಲಸಾರಿಗೆ ಮಂಡಳಿಯು ರಾಷ್ಟ್ರದ ಪ್ರತಿಷ್ಠಿತ ಬಂದರು ಉದ್ದಿಮೆದಾರರಾದ JSW ಕಂಪನಿಯೊoದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.

ಯೋಜನೆಯ ಸಂಬoಧಿತ ಅಧ್ಯಯನಗಳನ್ನು ನಡೆಸಲಾಗಿದ್ದು, ಯೋಜನೆಯು ಕಾರ್ಯಸಾಧ್ಯವೆಂದು ಕಂಡುಬOದಿದೆ. ಯೋಜನೆಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲು, ಜಿಲ್ಲಾಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಜೊತೆಗೆ ಸಾರ್ವಜನಿಕರು, ಜನಪ್ರತಿನಿಧಿಗಳು ಮತ್ತು ಯೋಜನೆಯಲ್ಲಿ ಹಿತಾಸಕ್ತಿ ಹೊಂದಿರುವವರ ಸಮ್ಮುಖದಲ್ಲಿ ಯೋಜನೆಯ ಬಗ್ಗೆ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲು ಸಾರ್ವಜನಿಕ ಅಹವಾಲು ಸಭೆಯನ್ನು ನಡೆಸಲಾಗುವುದು. ಈ ಸಾರ್ವಜನಿಕ ಅಹವಾಲು ಸಭೆಯಲ್ಲಿ ಸ್ಥಳೀಯರು ಭಾಗವಹಿಸಿ, ಸಾಮಾಜಿಕ-ಪರಿಸರ ಸಮಸ್ಯೆಗಳು ಮತ್ತು ಅದರ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲು ಅವಕಾಶವನ್ನು ನೀಡುತ್ತದೆ.
ಈ ಯೋಜನೆಯಿಂದ ಏನೆಲ್ಲಾ ಅನುಕೂಲ ಆಗಲಿದೆ?
ಈ ಬಂದರು ಯೋಜನೆಯಿಂದ ಉತ್ತರ ಕನ್ನಡ, ಕರಾವಳಿ ಕರ್ನಾಟಕ, ಉತ್ತರ ಮತ್ತು ದಕ್ಷಿಣ ಕರ್ನಾಟಕದ ಹಿನ್ನಾಡಿನ ಪ್ರದೇಶಗಳ ಕೈಗಾರಿಕೆಗಳ ಅಗತ್ಯ ಸರಕುಗಳು, ಕೃಷಿ, ಮೀನುಗಾರಿಕಾ ಉತ್ಪನ್ನಗಳು ಹಾಗೂ ಇನ್ನಿತರ ಸರಕು ಸಾಗಾಣಿಕೆಗೆ ಸಹಾಯವಾಗುತ್ತದೆ. ಉತ್ಪಾದನೆ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರನ್ನು ಆಕರ್ಷಿಸುತ್ತದೆ. ಬಂದರನ್ನು ಸಂಪರ್ಕಿಸುವ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಉತ್ತಮವಾಗಿ ಸಂಯೋಜಿಸಲ್ಪಡುತ್ತವೆ, ಇದು ಸ್ಥಳೀಯ ನಿವಾಸಿಗಳಿಗೂ ಪ್ರಯೋಜನಕಾರಿಯಾಗಲಿದೆ.
ಈ ಕೇಣಿ ಬಂದರು ನಿರ್ಮಾಣದಿಂದ ಜನರ ಬಹುಕಾಲದ ಬೇಡಿಕೆಗಳಲ್ಲೊಂದಾದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಸಾಧ್ಯತೆಗೊಳಲು ಸಹಕಾರಿಯಾಗಲಿದೆ. ಇದರ ಜೊತೆಗೆ ಈ ಯೋಜನೆಯು ಅಂಕೋಲಾ ತಾಲ್ಲೂಕು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಸಂಪರ್ಕದ ಉತ್ತೇಜನ, ಕೈಗಾರಿಕಾ, ಆರ್ಥಿಕ, ವಾಣಿಜ್ಯಾತ್ಮಕ ಅಭಿವೃದ್ಧಿಯಾಗುವುದರೊಂದಿಗೆ ವಿವಿಧ ಅವಕಾಶಗಳ ಮೂಲಕ ಜೀವನಮಟ್ಟವನ್ನು ಉನ್ನತಗೊಳಿಸುವ ಮಾರ್ಗವನ್ನು ಒದಗಿಸಲಿದೆ.

ಅಂಕೋಲಾದ ಸರ್ವತೋಮುಖ ಅಭಿವೃದ್ಧಿ ಸಾಧ್ಯ
JSW ಕಂಪನಿಯು ಕೇಣಿ, ಬಾವಿಕೆರೆ, ಅಂಕೋಲಾ, ಅಲಗೇರಿ, ಶಿರಕುಳಿ, ಬೊಗ್ರಿಬೈಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೀನುಗಾರರು ಮತ್ತು ಸ್ಥಳೀಯ ಸಮುದಾಯಗಳ ಸರ್ವೋತೋಮುಖ ಅಭಿವೃದಿಗಾಗಿ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅಡಿಯಲ್ಲಿ ಶೈಕ್ಷಣಿಕ, ಸಮುದಾಯ ಆರೋಗ್ಯ, ಸ್ಥಳೀಯರು ಹಾಗೂ ಮೀನುಗಾರರ ಸಮುದಾಯದವರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು, ಕೌಶಲ್ಯ ಅಭಿವೃದ್ಧಿ, ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಇನ್ನಿತರ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಯೋಜಿಸಿದೆ. ಇದರಿಂದಾಗಿ ಈ ಪ್ರದೇಶದ ಅಭಿವೃದ್ಧಿ ಖಂಡಿತವಾಗಿ ನಿಶ್ಚಿತವಾಗಿದೆ.

ಪ್ರವಾಸೋದ್ಯಮ ಚಟುವಟಿಕೆಗೆ ಪೂರಕ
ಕೇಣಿ ಬಂದರಿನ ನಿರ್ಮಾಣವು ನಗರೀಕರಣವನ್ನು ಉತ್ತೇಜಿಸುವುದರೊಂದಿಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಣಿಜ್ಯ, ಪ್ರವಾಸೋದ್ಯಮ, ಆತಿಥ್ಯ ಮತ್ತು ವಸತಿ ಅಭಿವೃದ್ಧಿ ಚಟುವಟಿಕೆಗಳಿಗೆ ಪೂರಕವಾಗಿರುತ್ತದೆ. ಇದರಿಂದಾಗಿ ಈ ಪ್ರದೇಶದ ಆರ್ಥಿಕ, ವಾಣಿಜ್ಯಾತ್ಮಕ, ಕೈಗಾರಿಕಾ ಅಭಿವೃದ್ಧಿಯೊಂದಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತದೆ. ಒಟ್ಟಾರೆ ಈ ಯೋಜನೆಯಿಂದ ಅಂಕೋಲಾ ತಾಲೂಕು ಮತ್ತು ಉತ್ತರ ಕನ್ನಡ ಜಿಲ್ಲೆಯ ಜನರ ಜೀವನ ಮಟ್ಟ ಖಂಡಿತವಾಗಿಯೂ ಸುಧಾರಿಸುತ್ತದೆ.
ಹಲವಾರು ಉದ್ಯೋಗಾವಕಾಶ ಸೃಷ್ಠಿ
ಈ ಯೋಜನೆಯು ಕಾರ್ಯಗತಗೊಳ್ಳುವುದರಿಂದ ಸ್ಥಳೀಯರಿಗೆ ಅವರ ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ಹಲವಾರು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಒದಗುತ್ತವೆ ಮತ್ತು ಸಾಕಷ್ಟು ವ್ಯಾಪಾರ ಅವಕಾಶಗಳು ಸೃಷ್ಟಿಯಾಗುತ್ತವೆ. ಈ ಯೋಜನೆಯು ಉತ್ತರ ಕನ್ನಡ ಜಿಲ್ಲೆಯ ಸರ್ವೋತೋಮುಖ ಅಭಿವೃದ್ಧಿಗೆ (ಗೇಮ್ ಚೇಂಜರ್) ಪೂರಕವಾಗಲಿದೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ.
ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ರೇಶ್ಮಾ ಉಳ್ಳಾಲ್ ಅವರನ್ನು ಮೊಬೈಲ್ ಸಂಖ್ಯೆ: 7411061555, E-mail: [email protected] ನಲ್ಲಿ ಸಂಪರ್ಕಿಸಬಹುದು. ಈ ಯೋಜನೆಯ ವಿಸ್ತೃತ ಮಾಹಿತಿಗಳನ್ನು ಈ ಕೆಳಗಿನ ಸಾಮಾಜಿಕ ಜಾಲತಾಣಗಳಲ್ಲಿ (Social Media) ನೋಡಬಹುದು
ವಿಸ್ಮಯ ನ್ಯೂಸ್, ವಿಲಾಸ್ ನಾಯಕ, ಅಂಕೋಲಾ