
ತನ್ನ ಹೆಂಡತಿಗೆ ರಾತ್ರಿ ಊಟದ ತಯಾರಿ ಮಾಡಲು ತಿಳಿಸಿ,ಮನೆಯಲ್ಲಿಯೇ ಕುಳಿತು ಅದೇನೋ ಬರೆಯುತ್ತಿದ್ದ,ಪಶು ಚಿಕಿತ್ಸಾಲಯದ ಡಿ ದರ್ಜೆ ನೌಕರನೋರ್ವ,ಆಕಸ್ಮಿಕ ಆರೋಗ್ಯ ಏರುಪೇರಿನ ಸಮಸ್ಯೆಯಿಂದ ಕುಳಿತಲ್ಲಿಯೇ ಮೃತಪಟ್ಟ ಘಟನೆ ಸಂಭವಿಸಿದೆ
ಅಂಕೋಲಾ: ಪಶು ಚಿಕಿತ್ಸಾಲಯದಲ್ಲಿ ಡಿ ದರ್ಜೆಯ ನೌಕರನಾಗಿದ್ದ ವ್ಯಕ್ತಿಯೋರ್ವ ,ಆಕಸ್ಮಿಕ ಆರೋಗ್ಯ ಏರುಪೇರಿನಿಂದ ಸಾವನಪ್ಪಿದ ಘಟನೆ ಹಟ್ಟಿಕೇರಿಯಲ್ಲಿ ಸಂಭವಿಸಿದೆ. ರೋಹಿದಾಸ ಎಸ್ ನಾಯ್ಕ (52) , ಮೃತ ದುರ್ದೈವಿ.ಕಳೆದ ಕೆಲವು ವರ್ಷಗಳಿಂದ ಪಶು ಚಿಕಿತ್ಸಾಲಯ ಹಾರವಾಡ (ಅವರ್ಸಾ ) ದಲ್ಲಿ ಡಿ ದರ್ಜೆಯ ನೌಕರನಾಗಿ,ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಈತ ,ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದ್ದ.
Job Alert: ಬೃಹತ್ ಶೋರೂಮ್ ಬ್ರೌನ್‌ವುಡ್ ನಲ್ಲಿ 12 ಉದ್ಯೋಗಾವಕಾಶಗಳು: ಇಂದೇ ಸಂಪರ್ಕಿಸಿ
ಜುಲೈ 3 ರ ಗುರುವಾರ ರಾತ್ರಿ 8, 20 ರ ಸುಮಾರಿಗೆ,ಹಟ್ಟಿ ಕೇರಿಯ ತನ್ನ ಮನೆಯಲ್ಲಿ ಇರುವಾಗ , ಹೆಂಡತಿಗೆ ರಾತ್ರಿ ಊಟಕ್ಕೆ ಚಪಾತಿ ಬಾಜಿ ಮಾಡಲು ತಿಳಿಸಿ, ತಾನು ಇಲಾಖೆಗೆ ಸಂಬಂಧಿಸಿದ ಯಾವುದೋ ಕಾಗದ ಪತ್ರ ಬರೆಯುತ್ತಿರಬೇಕಾದರೆ, ಹಠಾತ್ ಆಗಿ ಆತನಲ್ಲಿ ಕಾಣಿಸಿಕೊಂಡ ಕಡಿಮೆ ರಕ್ತದೊತ್ತಡ, ಹೃದಯಾಘಾತ,ಇಲ್ಲವೇ ಆಕಸ್ಮಿಕವಾದ ಆರೋಗ್ಯ ಏರುಪೇರಿನ ಗಂಭೀರ ಸಮಸ್ಯೆಯಿಂದ ಸ್ಥಳದಲ್ಲೇ ಕೊನೆಯುಸಿರೆಳೆದ ಎನ್ನಲಾಗಿದೆ.
ಮನೆಗೆ ಆಧಾರ ಸ್ತಂಭವಾಗಿದ್ದ ಯಜಮಾನನನ್ನು ಕಳೆದುಕೊಂಡು ,ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು,ರೋಧಿಸುವಂಥಾಗಿದ್ದು ,ನೊಂದ ಬಡ ಕುಟುಂಬಕ್ಕೆ ಇಲಾಖೆ ,ಸರ್ಕಾರ ಯೋಗ್ಯ ಪರಿಹಾರ ನೀಡಿ ಸಂತೈಸಬೇಕಿದೆ. ಶುಕ್ರವಾರ ಮೃತರ ಅಂತ್ಯಕ್ರಿಯೆ ನಡೆಸಲಾಗಿದ್ದು, ಅಂಕೋಲಾದ ಮುಖ್ಯ ಪಶು ವೈದ್ಯಾಧಿಕಾರಿ,ಡಾ ಶ್ರೀನಿವಾಸ ಪಾಟೀಲ,ಜಾನುವಾರು ಅಭಿವೃದ್ಧಿ ಅಧಿಕಾರಿ ಎಂ.ಎಂ ಹೆಗಡೆ,ಹೊರಗುತ್ತಿಗೆ ವೈದ್ಯರಾದ ಹಾರವಾಡದ ಡಾ ಪ್ರಶಾಂತ,ಅಡಿಗೋಣದ ಡಾ ವಿಜಯಕುಮಾರ, ಹಿಲ್ಲೂರಿನ ಡಾ.ಧನಂಜಯ, ಹಾಗೂ ಸಿಬ್ಬಂದಿಗಳು,ಸ್ಥಳೀಯ ಗಣ್ಯರು, ಇತರರು ಮೃತರ ಅಂತಿಮ ದರ್ಶನ ಪಡೆದುಕೊಂಡರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ