ಪ್ರಥಮ ಪಿ ಯು ವಿದ್ಯಾರ್ಥಿ ನೇಣಿಗೆ ಶರಣು : ತರಗತಿ ಮುಗಿಸಿ ಮನೆಗೆ ಹೋಗುವಾಗ ಕ್ಲಾಸ್ ರೂಂ ಬೀಗ ಹಾಕಲು ಸಹಕರಿಸಿದವ, ಮತ್ತೆ ಕಾಲೇಜ ಮೆಟ್ಟಿಲು ಹತ್ತಲಾಗಲೇ ಇಲ್ಲ ?

ಅಂಕೋಲಾ: ಪ್ರಥಮ ಪಿ ಯು ವ್ಯಾಸಂಗ ಮಾಡುತ್ತಿದ್ದ ಕಾಲೇಜ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗ್ರಾಮೀಣ ಪ್ರದೇಶವಾದ ಅಗಸೂರಿನಲ್ಲಿ ನಡೆದಿದೆ. ಅಗಸೂರು ನಿವಾಸಿ ಚೇತನ ಬೊಮ್ಮು ಗೌಡ(16) ಮೃತ ದುರ್ದೈವಿ. ಕಿಡ್ನಿ ಸಂಬಂಧಿಸಿದ ಆರೋಗ್ಯ ಸಮಸ್ಯೆಯಿಂದ ಆಗಾಗ ಬಳಲುತ್ತಿದ್ದ ಎನ್ನಲಾದ ಈತನಿಗೆ ಚಿಕಿತ್ಸೆ ನೀಡಲಾಗಿತ್ತು ಎನ್ನಲಾಗಿದೆ.
ಊರಿನಲ್ಲೇ ಇರುವ, ಕಾಲೇಜಿಗೆ ಹೋಗಿ ,ಮನೆಗೆ ಬರುವ ಪೂರ್ವ ಎಲ್ಲರೊಂದಿಗೆ ಸರಿಯಾಗಿ ಇದ್ದು,ಕಾಲೇಜ್ ರೂಮುಗಳ ಚಾವಿ ಹಾಕಲು ಸಹಕರಿಸಿದ ಎನ್ನಲಾಗಿದೆ. ನಂತರ ಮನೆಗೆ ಬಂದಿದ್ದ ಈತ ತನಗಿರುವ ಕಾಯಿಲೆಯನ್ನು ಮನಸ್ಸಿಗೆ ಹಚ್ಚಿಕೊಂಡು ಇಲ್ಲವೇ ಬೇರೆ ಯಾವುದೋ ಕಾರಣದಿಂದ ನೊಂದು ಮನೆಯ ಮೇಲ್ಛಾವಣಿ ಪಕಾಸಿಗೆ ಸೀರೆ ಕಟ್ಟಿ ಅದರ ಇನ್ನೊಂದು ತುದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿತಿಳಿದು ಬಂದಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿರುವವನಿಗೆ ಮನೆಯವರು ಮತ್ತು ಅಕ್ಕ ಪಕ್ಕದವರು ಕೆಳಗೆ ಇಳಿಸಿ, ಬದುಕಿರಬಹುದೆಂಬ ಆಶಾ ಭಾವನೆ ಇಂದ, ಅಂಕೋಲಾ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದು, ವೈದ್ಯರು ಆತ ಮೃತ ಪಟ್ಟಿರುವುದಾಗಿ ದೃಡಪಡಿಸಿದ್ದಾಗಿ ತಿಳಿದು ಬಂದಿದೆ.
ಅಂಕೋಲಾ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿ ಕಾನೂನು ಕ್ರಮ ಮುಂದುವರೆಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಬೇರೊಂದು ಪ್ರಕರಣದಲ್ಲಿ ಹೊಟ್ಟೆನೋವು ಮತ್ತಿತರ ಆರೋಗ್ಯ ಸಮಸ್ಯೆ ಇತ್ತೆನ್ನಲಾದ ಅದೇ ಕಾಲೇಜಿನ ವಿದ್ಯಾರ್ಥಿನಿ ಯೋರ್ವಳು , ತನಗಿರುವ ಆರೋಗ್ಯ ಸಮಸ್ಯೆ ಇಲ್ಲವೇ ಬೇರೆ ಯಾವುದೋ ಕಾರಣದಿಂದ ತನ್ನ ಮನೆಯ ದೇವರ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದ ಕಹಿ ಘಟನೆಯ ನೆನಪು ಮರೆಯಾಗುವ ಮುನ್ನವೇ , ಇನ್ನೋರ್ವ ವಿಧ್ಯಾರ್ಥಿಯೂ ಸಾವಿಗೆ ಶರಣಾಗಿದ್ದು , ಕಾಲೇಜು , ಮೃತರ ಕುಟುಂಬ ಹಾಗೂ ಊರಲ್ಲಿ ಶೋಕದ ವಾತಾವರಣ ಮೂಡಿಸಿದಂತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ