
- ನೂತನ ಅಧ್ಯಕ್ಷರು& ಪದಾಧಿಕಾರಿಗಳ ಪದಗ್ರಹಣ ಸಮಾರಂಭ
- ಜುಲೈ 16 ರ ಬುಧವಾರ ಸಂಜೆ 6 .00 ಗಂಟೆಗೆ ಕಾರ್ಯಕ್ರಮ
- ಎಸ್ಪಿ ಎಂ ನಾರಾಯಣ ಅವರಿಗೆ ಸಮಾಜ ಪರಿವರ್ತಕ ಪುರಸ್ಕಾರ
- ರೋಟರಿ ಕ್ಲಬ್ ನವರು ಪತ್ರಿಕಾ ಪ್ರಕಟಣೆ
ಅಂಕೋಲಾ : ನಿರಂತರ ವಿಧಾಯಕ ಕಾರ್ಯಗಳ ಮೂಲಕ ಜಿಲ್ಲೆಯ ಪ್ರತಿಷ್ಠಿತ ರೋಟರಿ ಸಂಸ್ಥೆಗಳಲ್ಲಿ ಒಂದಾದ ಅಂಕೋಲಾ ರೂರಲ್ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ16 ರ ಬುಧವಾರ ಸಂಜೆ 6 .00 ಗಂಟೆಗೆ ಶೆಟಗೇರಿಯ ವಾಸುದೇವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ವಂದಿಗೆ ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷರೂ, ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂದಿರುವ ಪುಷ್ಪಲತಾ ನಾಯಕ ಅವರು ರೋಟರಿಯ ನೂತನ ಅಧ್ಯಕ್ಷರಾಗಿ ಮತ್ತು ಸದಾನಂದ ನಾಯಕ ಸೇರಿದಂತೆ ಇತರೆ ಪದಾ ಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ.
ಎಸ್ಪಿ ಎಂ ನಾರಾಯಣ ಅವರಿಗೆ ಸಮಾಜ ಪರಿವರ್ತಕ ಪುರಸ್ಕಾರ
ಮಂಗಳೂರಿನ ಹಿರಿಯ ರೋಟರಿ ಸದಸ್ಯರಾದ ರೋ. ಬಿ . ಶೇಖರ್ ಶೆಟ್ಟಿ ಪದಗ್ರಹಣ ನಡೆಸಿಕೊಡಲಿದ್ದು, ಶಾಸಕರಾದ ಸತೀಶ್ ಸೈಲ್ , ರೋಟರಿ ಅಸಿಸ್ಟಂಟ್ ಗವರ್ನರ್ ರಾದ ಕುಮಟಾದ ಚೇತನ್ ಶೇಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಇದೇ ವೇಳೆ, ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾಗಿ ,ತನ್ನ ಕರ್ತವ್ಯ ಬದ್ಧತೆ ಜೊತೆಯಲ್ಲಿ ಸಮಾಜದ ಎಲ್ಲರೊಂದಿಗೆ ಬೆರೆತು , ಕಾನೂನು ಸುವ್ಯವಸ್ಥೆ ಕಾಪಾಡುತ್ತಾ, ಜನ ಮನ ಗೆದ್ದಿರುವ ಅಧಿಕಾರಿ ಎಂ ನಾರಾಯಣ ಅವರಿಗೆ ರೋಟರಿ ಸಂಸ್ಥೆಯಿಂದ ‘ಸಮಾಜ ಪರಿವರ್ತಕ ‘ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ರೋಟರಿ ಕ್ಲಬ್ ನವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ


