
ಅಂಕೋಲಾ: ಅಂತರಾಷ್ಟ್ರೀಯ ಲಾಯನ್ಸ್ ಸಂಸ್ಥೆಯ ಸ್ಥಳೀಯ ಘಟಕವಾಗಿ ಕಳೆದ 25 ವರ್ಷಗಳಿಂದ ,ನೂರಾರು ವಿಧಾಯಕ ಕಾರ್ಯಗಳು ಹಾಗೂ ಸಮಾಜ ಸೇವೆಯ ಮೂಲಕ ತನ್ನನ್ನು ಗುರುತಿಸಿಕೊಂಡಿರುವ ಲಾಯನ್ಸ್ ಕ್ಲಬ್ ಅಂಕೋಲಾ ಕರಾವಳಿಯು, ಇತ್ತೀಚೆಗಷ್ಟೇ ಬೆಳ್ಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಮತ್ತಷ್ಟು ಗಮನ ಸೆಳೆದಿದೆ.
ಸಿಂಹಕೂಟ ಎನ್ನಲಾಗುವ ಈ ಲಾಯನ್ಸ ಸಂಸ್ಥೆಯ 2025-26 ನೇ ಸಾಲಿನ ಅಧ್ಯಕ್ಷರಾಗಿ,ಅಂಕೋಲಾ ಪಟ್ಟಣದ ಹೆಸರಾಂತ ವ್ಯಾಪಾರಸ್ಥ ಸ್ವೀಟ್ ಸಾಗರ ಮಾಲಕ ರಮೇಶ ಪರಮಾರ, ಹಾಗೂ ಕಾರ್ಯದರ್ಶಿಯಾಗಿ ನಿವೃತ್ತ ಶಿಕ್ಷಕ ಅಂಬಾರಕೊಡ್ಲದ ಕೆ.ಎಮ್.ಗೌಡ ಮತ್ತು ಖಜಾಂಜಿಯಾಗಿ ಹೆಸರಾಂತ ವ್ಯಾಪಾರಸ್ಥ ಚೇನ್ ಸಿಂಗ್ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಬಾಸಗೋಡಿನ ದೇವಾನಂದ ಬೊಮ್ಮಯ್ಯ ಗಾಂವಕರರವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕ್ಲಬ್ಬಿನ ಹಿರಿ-ಕಿರಿಯ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ