
ಹೊನ್ನಾವರ: ಅಖಿಲ ಕರ್ನಾಟಕ ಮಾಜಿ ಸೈನಿಕರ ಘಟಕದ ವತಿಯಿಂದ ಹೊನ್ನಾವರ ಪಟ್ಟಣದಲ್ಲಿ 26ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಪಟ್ಟಣದಲ್ಲಿ ತಿರಂಗಾ ಮೆರವಣೆಗೆ ಜರುಗಿತು. ಬೃಹತ್ ತಿರಂಗಾ ಮೆರವಣೆಗೆಯು ಪಟ್ಟಣದ ಶರಾವತಿ ಸರ್ಕಲ್ ಮೂಲಕ ಪಟ್ಟಣದ ವಿವಿಧಡೆ ಸಂಚರಿಸಿ ನ್ಯೂ ಇಂಗ್ಲೀಷ್ ಸಮೀಪ ಸಮಾರೋಪಗೊಂಡಿತು. ಮೆರವಣೆಗೆ ಸಾಗುವಾಗ ದೇಶಭಕ್ತಿಯ ಜಯಘೋಷ ಮೊಳಗಿತು.
ನಂತರ ನ್ಯೂ ಇಂಗ್ಲೀಷ್ ಸ್ಕೂಲ ಸಭಾಭವನದಲ್ಲಿ ನಡೆದ ಕಾರ್ಗಿಲ್ ವೀರ ಯೋಧರಿಗೆ ಪುಷ್ಪನಮನದ ಮೂಲಕ ಗೌರವ ಸಲ್ಲಿಸಲಾಯಿತು. ದೇಶಸೇವೆಗಾಗಿ ಹುತಾತ್ಮರಾದ ಯೋಧರಿಗೆ ಮೌನಾಚರಣೆಯ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸೈನಿಕ ಸಂಘದ ತಾಲೂಕ ಅಧ್ಯಕ್ಷ ಅಶೋಕ ನಾಯ್ಕ ಮಾತನಾಡಿ ಕಾರ್ಗಿಲ್ ಪ್ರದೇಶದಲ್ಲಿ ಮೂರು ತಿಂಗಳ ಬಳಿಕ ನೆರೆಯ ಪಾಕಿಸ್ತಾನದವರು ನಮ್ಮ ಯೋಧರ ಮೇಲೆ ಗುಂಡಿನ ದಾಳಿ ನಡೆಸಿತು. ಸರಿಸುಮಾರು ಮೂರು ತಿಂಗಳ ಬಳಿಕ ಜುಲೈ 26 ರಂದು ಯುದ್ದದಲ್ಲಿ ಭಾರತವು ಗೆಲ್ಲುವ ಸಾಧಿಸಿತು. ಅಂದಿನಿoದ ದೇಶದೆಲ್ಲಡೆ ಈ ದಿನವನ್ನು ಸಂಭ್ರಮಾಚರಣೆ ಮಾಡಲಾಗುತ್ತಿದೆ ಎಂದರು.
ಯುವ ಬ್ರಿಗೇಡ್ ಕಾರ್ಯಕರ್ತರಾದ ಮಹೇಶ ಕಲ್ಯಾಣಪುರ ಮಾತನಾಡಿ ಕಾರ್ಗಿಲ್ ವಿಜಯೋತ್ಸವ ಒಂದು ದಿನದ ಸಂಭ್ರಮಾಚರಣೆಯಲ್ಲ. ಪ್ರತಿದಿನ ಭಾರತೀಯರು ಸಂಭ್ರಮಿಸಬೇಕಾಗಿದೆ. ಕಾರ್ಗಿಲ್ ವಿಜಯೋತ್ಸವದ ಸಂದರ್ಭವನ್ನು ತಾಲೂಕಿನ ಶಾಲೆಗಳಲ್ಲಿ ಯುವ ಬ್ರಿಗೇಡ್ ವತಿಯಿಂದ ಕಾರ್ಯಕ್ರಮ ಆಯೋಜಿಸಿ ಸೈನಿಕರ ಯಶೋಗಾಥೆಯನ್ನು ವಿವರಿಸಿ ದೇಶಪ್ರೆಡಮ ಮೂಡಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರಾಜು ಮಾಳಗಿಮನೆ, ಬಿಜೆಪಿ ತಾಲೂಕ ಅಧ್ಯಕ್ಷ ಮಂಜುನಾಥ ನಾಯ್ಕ, ಹೊನ್ನಾವರ ಉಳಿಸಿ ಬೆಳೆಸಿ ಸಂಘಟನೆಯ ಅಧ್ಯಕ್ಷ ಜಿ.ಎನ್.ಗೌಡ, ರಾಜು ಭಂಡಾರಿ, ಪ.ಪಂ.ಸದಸ್ಯ ಶಿವರಾಜ ಮೇಸ್ತ, ಸೇರಿದಂತೆ ರೋಟರಿ ಕ್ಲಬ್ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮುಂತಾದವರು ಇದ್ದರು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ