
ಭಟ್ಕಳ: ತಾಲೂಕಿನ ಉತ್ತರಕೊಪ್ಪ ಬಿಡಕ್ಕಿ ಬೈಲ್ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕದ ಅಡ್ಡೆಯ ಮೇಲೆ ದಾಳಿ ನಡೆಸಿದ ಮುರುಡೇಶ್ವರ ಪೋಲಿಸರು ಮೂವರು ಆರೋಪಿಗಳ ಸಮೇತರಾಗಿ ಮೋಟಾರು ಬೈಕ್, ಜೂಜಿಗೆ ಬಳಕೆಯಾದ ಕೋಳಿ ಹುಂಜ ಹಾಗೂ ನಗದನ್ನು ವಶಕ್ಕೆ ಪಡೆದಿದ್ದಾರೆ.
ಶನಿಯಾರ ನಾಗಪ್ಪ ನಾಯ್ಕ, ರಾಘವೇಂದ್ರ ಸುಬ್ರಾಯ ನಾಯ್ಕ, ಗಣಪತಿ ನಾರಾಯಣ ನಾಯ್ಕ ಬಂಧಿತ ಆರೋಪಿಗಳಾಗಿದ್ದು, ಸ್ಥಳದಲ್ಲಿ ಸಿಕ್ಕ ನಾಲ್ಕು ಬೈಕ್ ಗಳು, 1,200 ನಗದು, 6 ಕೋಳಿ ಹುಂಜಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುರುಡೇಶ್ವರ ಠಾಣೆಯ ಪೋಲಿಸ ಉಪನೀರಿಕ್ಷಕ ಹನುಮಂತ ಬಿರಾದಾರ ನೇತೃತ್ವದಲ್ಲಿ ಮುರುಡೇಶ್ವರ ಪೋಲಿಸ ಠಾಣೆಯ ಸಿಬ್ಬಂದಿಗಳಾದ ಸುರೇಂದ್ರ ಅಲಗೇರಿಕರ್, ಸಂಗಪ್ಪ ಹರಿಜನ, ಮಹೇಶ ಸಮನಳ್ಳಿ, ವಿಜಯ ನಾಯ್ಕ, ಯೋಗೇಶ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ