ರಾಷ್ಟ್ರೀಯ ಪ್ರಾಣಿ ಹುಲಿ ಸಂರಕ್ಷಣಾ ಕರ್ತವ್ಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಯುವ ಅಧಿಕಾರಿ: ಅಂಕೋಲಿಗ ಗುರುರಾಜ್ ಗೌಡರಿಗೆ ಒಲಿದು ಬಂದ ಪುರಸ್ಕಾರ

- “ಗ್ಲೋಬಲ್ ಟೈಗರ್ ಡೇ 2025”
- ಗುರುರಾಜ್ ಗೌಡರಿಗೆ ಒಲಿದ ಪ್ರತಿಷ್ಠಿತ ಪ್ರಶಸ್ತಿ
- ತಾಲೂಕು, ಜಿಲ್ಲೆಯ ಜನರಿಂದ ಸಂತಸ
ಅಂಕೋಲಾ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನೀಡುವ ಎನ್ ಟಿಸಿಎ ಅವಾರ್ಡ್ಗೆ ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಗುರುರಾಜ ಸಾತು ಗೌಡ ಅವರಿಗೆ ನವದೆಹಲಿಯಲ್ಲಿ ನಡೆದ “ಗ್ಲೋಬಲ್ ಟೈಗರ್ ಡೇ 2025″ರ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.
ಹಳ್ಳಿಯಿಂದ ದಿಲ್ಲಿಗೆ ಹೋಗಿ ಜೋಯಿಡಾದ ಕೀರ್ತಿ ಹೆಚ್ಚಿಸಿದ ಕರಾವಳಿ ಕನ್ನಡಿಗ
ದೆಹಲಿಯಲ್ಲಿ ಜಾಗತಿಕ ಹುಲಿದಿನ 2025 ರ ಕಾರ್ಯಕ್ರಮದಲ್ಲಿ ಅರಣ್ಯ ಮಂತ್ರಿಗಳಾದ ಮಾನ್ಯ ಭೂಪೆಂದ್ರ ಯಾದವ್ ಅವರು ಗುರುರಾಜ್ ಗೌಡ ಅವರಿಗೆ ಎನ್ ಟಿ ಸಿ ಎ ಪುರಸ್ಕಾರ ನೀಡಿ ಗೌರವಿಸಿದರು .ಇದು ಕೇವಲ ಅವರ ವ್ಯಕ್ತಿ ಗೌರವಕ್ಕೆ ಸೀಮಿತವಾಗಿರದೆ ನಮ್ಮ ಕರ್ನಾಟಕ ಹುಲಿ ಸಂರಕ್ಷಿತ ಪ್ರದೇಶ ವನ್ಯ ಜೀವಿ ವಿಭಾಗಕ್ಕೆ ಸಿಕ್ಕ ಗೌರವ ಪುರಸ್ಕಾರದಂತಿದ್ದು, ಇಲಾಖೆ ಮತ್ತು ಜೊಯಿಡಾ ತಾಲೂಕನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದಕ್ಕೆ ತಾಲೂಕಿನ ಜನರು , ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಗೇರಿಯ ಮೂಲ ನಿವಾಸಿಯಾಗಿರುವ ಈ ಯುವ ಅಧಿಕಾರಿ ಗುರುರಾಜ್ ಗೌಡ ಅವರು 2024 ನೇ ಸಾಲಿನಲ್ಲಿ ಕರ್ನಾಟಕ ಸರಕಾರ ನೀಡುವ ಮಾನ್ಯ ಮುಖ್ಯಮಂತ್ರಿಗಳ ಬಂಗಾರದ ಪದಕಕ್ಕೆ ಭಾಜನರಾಗಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಯ ಮೂಲಕ ಹುಟ್ಟೂರು ಬಡಗೇರಿ ಹಾಗೂ ತಮ್ಮ ಹಾಲಕ್ಕಿ ಸಮಾಜಕ್ಕೂ ಹೆಮ್ಮೆ ಮೂಡಿಸಿ, ಅಂಕೋಲಾ ತಾಲೂಕು ಹಾಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಸಮಾಜಮುಖಿ ಚಿಂತನೆಯ ಬಹುಮುಖ ವ್ಯಕ್ತಿತ್ವದ ನಿವೃತ್ತ ಶಿಕ್ಷಕ ಸಾತು ಗೌಡ ಮತ್ತು ಸುಮಿತ್ರಾಗೌಡರ ಸುಪುತ್ರನಾಗಿರುವ ಗುರುರಾಜ ಗೌಡ ,ತಮ್ಮ ಕುಟುಂಬಕ್ಕೂ ಹೆಮ್ಮೆ ಮೂಡಿಸುವ ಸಾಧನೆ ಮಾಡಿದ್ದು,ಭವಿಷ್ಯದಲ್ಲಿ ಇವರ ಕರ್ತವ್ಯ ದಕ್ಷತೆ ಮತ್ತಷ್ಟು ಹೆಚ್ಚಿ,ಇನ್ನು ಹೆಚ್ಚಿನ ಸ್ಥಾನಮಾನಗಳು ಅವರನ್ನರಸಿ ಬರಲಿ ಎನ್ನುವುದು,ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಮತ್ತು ಹೆಸರಾಂತ ನಾಟಿವೈದ್ಯ ಹನುಮಂತ್ ಬಿ ಗೌಡ,ಉಪಾಧ್ಯಕ್ಷ ಮತ್ತು ಪುರಸಭೆ ಸದಸ್ಯ ಪ್ರಕಾಶ್ ಗೌಡ ಸೇರಿದಂತೆ ಸಮಾಜದ ಪ್ರಮುಖರು ಹಾಗೂ,ಸಾತು ಗೌಡ ಅವರ ಕುಟುಂಬದ ಆಪ್ತರು, ಹಿತೈಷಿಗಳ ಆಶಯವಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ