
ಭಟ್ಕಳ: ಕೆಸರು ಗದ್ದೆ ಗ್ರಾಮೀಣ ಕ್ರೀಡಾಕೂಟವು ನಮ್ಮನ್ನು ಮಣ್ಣಿನ ಜತೆ ಸಂಪರ್ಕ ಹೊಂದುವoತೆ ಮಾಡಿದೆ. ಮನುಷ್ಯನಿಗೆ ಮಣ್ಣಿನ ಸಂಪರ್ಕ ಅಗತ್ಯವಿದ್ದು ಆಧುನಿಕ ಜಗತ್ತಿನಲ್ಲಿ ಮಡ್ ತೆರಪಿಯ ಮೂಲಕ ಜನರು ಒತ್ತಡದ ಜೀವನದಿಂದ ಹೊರಬರಲು ಪ್ರಯತ್ನುಸುತ್ತಿದ್ದಾರೆ ಎಂದು ಹೈಕೋರ್ಟ್ ನ್ಯಾಯವಾದಿ ನಾಗೇಂದ್ರ ನಾಯ್ಕ ಹೇಳಿದರು.
ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ ನೇತೃತ್ವದಲ್ಲಿ ಭಟ್ಕಳ ತಾಲೂಕಿನ ಸರ್ಪನಕಟ್ಟೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿದ್ದ ಕೇಸರು ಗದ್ದೆ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಇಗೀನ ಮಕ್ಕಳಿಗೆ ಕೃಷಿಯ ಕುರಿತಾಗಿ ಅನಾಸಕ್ತಿ ಇದೆ . ಇಂತಹ ಕ್ರೀಡಾಕೂಟದಲ್ಲಿ ಮಕ್ಕಳು ಭಾಗಿಯಾಗುವುದರಿಂದ ಗದ್ದೆಯ ಸಂಪರ್ಕಕ್ಕೆ ಬರುವ ಅವರಿಗೆ ಕೃಷಿಯಲ್ಲೂ ಆಸಕ್ತಿ ಮೂಡಬಹುದಾಗಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಆಗಾಗ ನಡೆಯುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಾನಂದ ನಾಯ್ಕ, ಗ್ರಾಮೀಣ ಸಹಕಾರಿ ಸೇವಾ ಸಂಘ ಬೆಳಕೆ ಅಧ್ಯಕ್ಷ ಮಾದೇವ ನಾಯ್ಕ, ಬಿಜೆಪಿ ತಾಲೂಕಾ ಮಂಡಲದ ಅಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ, ವಾಸು ನಾಯ್ಕ ಮಾತನಾಡಿ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಕ್ರೀಡಾಕೂಟದಲ್ಲಿ ಮಕ್ಕಳು, ಮಹಿಳೆಯರು, ಪುರುಷರಿಗಾಗಿ ಓಟದ ಸ್ಪರ್ಧೆ, ಉಪ್ಪುಮೂಟೆ, ನರಿ ಮೂಳೆ ಹುಡುಕುವುದು, ಹಿಂಬದಿ ನಡಿಗೆ, ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ನಡೆಸಲಾಗಿದ್ದು, ಹಾಜರಿದ್ದ ಎಲ್ಲರಿಗೂ ಬೆಳಿಗ್ಗೆ ಅವಲಕ್ಕಿ ಬೈರಾ ಹಾಗೂ ಮಧ್ಯಾಹ್ನ ಅಕ್ಕಿ ಗಂಜಿ ಊಟವನ್ನು ನೀಡಲಾಯಿತು.
ಬೆಳಿಗ್ಗೆಯಿಂದ ಸಂಜೆಯವರೆಗೂ ಮಕ್ಕಳು, ಯುವಕರು ಕೇಸರಲ್ಲಿ ಮಿಂದೆದ್ದು ಸಂಭ್ರಮಿಸಿದ್ದು ನೋಡಲು ಹರ್ಷವೆನಿಸಿದ್ದು. ಸ್ಪರ್ಧೆಯಲ್ಲಿ ಗೆದ್ದ ಸ್ಪರ್ಧಾಳುಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳಿಯ ಕ್ರಿಕೇಟ್ ಪಂದ್ಯಾಟದ ವಿಕ್ಷಕ ವಿವರಣೆಕಾರ ಇರ್ಪಾನ್ ನಿರೂಪಣೆ ವಿಶೇಷವಾಗಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ನೀಡಿತ್ತು.
ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ