Join Our

WhatsApp Group
Focus News
Trending

ಅಂಕೋಲಾದಲ್ಲಿ ಸ್ವಾತಂತ್ರ‍್ಯೋತ್ಸವ ಆಚರಣೆ ಅಂಗವಾಗಿ ಪೂರ್ವಭಾವಿ ಸಭೆ

ಅಂಕೋಲಾ: ಸ್ವಾತಂತ್ರ‍್ಯೋತ್ಸವ ಆಚರಣೆ ಅಂಗವಾಗಿ ಪೂರ್ವಭಾವಿ ಸಭೆ ನಡೆಯಿತು. ಆಡಳಿತ ವ್ಯವಸ್ಥೆಗೆ ಸರ್ಜರಿ ಮಾಡಲು ಮುಂದಾಗಿರುವ ಡಾ ಚಿಕ್ಕಪ್ಪ ನಾಯಕ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ತಾಲೂಕಿನ ಎಲ್ಲಾ ಇಲಾಖೆಗಳು ಮಹತ್ವ ನೀಡಬೇಕಿದ್ದು ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಯೊಂದು ಇಲಾಖೆಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಅಂಕೋಲಾ ತಹಶೀಲ್ದಾರ ಡಾ.ಚಿಕ್ಕಪ್ಪ ನಾಯಕ ಹೇಳಿದರು. ತಹಶೀಲ್ದಾರರ ಕಾರ್ಯಾಲಯದ ಸಭಾಭವನದಲ್ಲಿ ನಡೆದ ಸ್ವಾತಂತ್ರ‍್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಸ್ವಾತಂತ್ರ‍್ಯ ಹೋರಾಟಕ್ಕೆ ಖ್ಯಾತಿ ಪಡೆದಿರುವ ನೆಲದಲ್ಲಿ ನಡೆಯುವ ಸ್ವಾತಂತ್ರ‍್ಯೋತ್ಸವ ಸಂಭ್ರಮದಲ್ಲಿ ಸರ್ವರೂ ಸಮನ್ವಯತೆಯೊಂದಿಗೆ ಭಾಗವಹಿಸಿ ಹಬ್ಬದ ಸೊಬಗನ್ನು ಹೆಚ್ಚಿಸಬೇಕು ಎಂದರು.

ಪ್ರತಿಯೊAದು ಇಲಾಖೆಗಳು ಸಂಘ ಸಂಸ್ಥೆಗಳು ನಿಗದಿತ ಸಮಯದಲ್ಲಿ ಧ್ವಜಾರೋಹಣ ನಡೆಸಬೇಕು, ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಸ್ವಾತಂತ್ರ‍್ಯೋತ್ಸವ ಆಚರಣೆಗೆ ಸರ್ವ ಸಿದ್ಧತೆ ಮಾಡಿಕೊಳ್ಳಬೇಕು, ಸಾರ್ವಜನಿಕ ಧ್ವಜಾರೋಹಣ ನಡೆಯುವ ಸ್ಥಳದಲ್ಲಿ ಅಗತ್ಯ ತಯಾರಿಗಳನ್ನು ಸಂಬAಧಿಸಿದ ಇಲಾಖೆಗಳು ಮಾಡಬೇಕು ಎಂದ ಅವರು ಶಾಲಾ ಮಕ್ಕಳ ಪಥ ಸಂಚಲನಕ್ಕೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಆರಕ್ಷಕ ಇಲಾಖೆ ಗಮನ ಹರಿಸಬೇಕು ಎಂದು ಸೂಚಿಸಿದರು.

ತಾಲೂಕಿನಲ್ಲಿ ನಡೆದ ಸ್ವಾತಂತ್ರ‍್ಯ ಹೋರಾಟದ ಸ್ಮರಣಾರ್ಥವಾಗಿ ಗಾಂಧಿ ಮೈದಾನದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಸ್ಮಾರಕ ಭವನದ ಕಟ್ಟಡಗಳು ಮತ್ತು ಅಲ್ಲಿನ ವ್ಯವಸ್ಥೆಯ ದುಸ್ಥಿತಿ ಕುರಿತು ಸಾರ್ವಜನಿಕ ವಲಯದ ಪರವಾಗಿ ಕೇಳಿ ಬಂದ ಅಸಮಾಧಾನದ ಬಗ್ಗೆ ಮಾತನಾಡಿ,ಈ ಸಭೆ ಕರೆಯುವ ಮೊದಲೇ ಮೂರ್ ನಾಲ್ಕು ಬಾರಿ ಅಲ್ಲಿ ಭೇಟಿ ನೀಡಿ ಪರಿಶೀಲಿಸಿದ್ದು, ತಾತ್ಕಾಲಿಕವಾಗಿ ನೀರು ಮತ್ತಿತರಕ್ಕೆಲ್ಲ ಮೂಲಭೂತ ಸೌಕರ್ಯಗಳ ಸುಧಾರಣೆಗೆ ತಹಶೀಲ್ದಾರರು ಲಭ್ಯ ಅನುದಾನ ಮತ್ತು ದಾನಿಗಳ ಸಹಕಾರದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಗಳನ್ನು ನಡೆಸುತ್ತಿರುವುದಾಗಿ ತಿಳಿಸಿದರು.

ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ, ಉಪ ತಹಶೀಲ್ದಾರ ಗಿರೀಶ್ ಜಾಂಬಾವಳಿಕರ್,ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕಿನ ಗಣ್ಯರು, ಸಂಘ ಸಂಸ್ಥೆಗಳ ಪ್ರಮುಖರು,ಕೆಲ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಪಥಸಂಚಲನ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ತಾಲೂಕಿನ ಸುಮಾರು 5 ಸಾವಿರಕ್ಕೂ ಹೆಚ್ಚು ಹಿರಿ-ಕಿರಿಯ ವಿದ್ಯಾರ್ಥಿಗಳಿಗೆ ಸಿಹಿ ವಿತರಣೆಗೆ ಯುವ ಉದ್ದಿಮೆದಾರ ಬೇಳಾ ಬಂದರಿನ ಸುಜಿತ ನಾರಾಯಣ ನಾಯ್ಕ,ಧ್ವನಿವರ್ಧಕ ಸಹಿತ ಭಾರತಾಂಬೆಯ ಭಾವಚಿತ್ರವುಳ್ಳ ಮೆರವಣಿಗೆಗೆ ಪೂರಕವಾದ ರಿಕ್ಷಾವಾಹನವನ್ನು ಪುರಸಭೆ ಸದಸ್ಯ ಪ್ರಕಾಶ್ ಗೌಡ ಪ್ರಾಯೋಜಿಸುತ್ತಿರುವುದಾಗಿ ತಿಳಿಸಲಾಯಿತು.

ಈ ಹಿಂದಿನಿoದಲೂ ಸ್ಪಾತಂತ್ರೋತ್ಸವ ಮತ್ತು ಗಣರಾಜ್ಯೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆಗೆ ಹಲವರು ಹಾಜರಿ ಕಂಡು ಬರುತ್ತಿದ್ದರೂ,ಅವುಗಳ ಹೊರತಾಗಿ ಇತ್ತೀಚಿಗೆ ರಾಷ್ಟ್ರ ಪುರುಷರ ಜಯಂತಿ ಮತ್ತಿತರ ಕೆಲ ತಾಲೂಕ ಮಟ್ಟದ ಕಾರ್ಯಕ್ರಮಗಳು ಹೆಸರಿಗಷ್ಟೇ ಆಯೋಜನೆಯಾಗಿ ಸಪ್ಪೆ ಎ ನಿಸುವಂತಿರುತ್ತಿತ್ತು.ಈ ಕುರಿತು ಸಾರ್ವಜನಿಕರ ಪರವಾಗಿ ವಿಸ್ಮಯ ವಾಹಿನಿಯವರು ನೂತನ ತಹಶೀಲ್ದಾರ ಅವರ ಗಮನಕ್ಕೆ ತಂದಿದ್ದರು.

ಈ ಕುರಿತು ಡಾ ಚಿಕ್ಕಪ್ಪ ನಾಯಕರವರು,ಕಳೆದ ಒಂದೆರಡು ಸಭೆ ಮತ್ತು ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿ ಎಲ್ಲ ಇಲಾಖೆಗಳಿಗೆ ಖಡಕ್ ಸೂಚನೆ ನೀಡಿದ ಬೆನ್ನಲ್ಲೇ,ಈ ದಿನದ ಸಭೆಯಲ್ಲಿ ಮತ್ತೊಮ್ಮೆ ಅದನ್ನೇ ಪುನರುಚ್ಚರಿಸುವ ಮೂಲಕ ಕಾರ್ಯಕ್ರಮಗಳಿಗೆ ಗೈರು ಆಗುವವರಿಗೆ ಖಡಕ್ ಎಚ್ಚರಿಕೆ ನೀಡಿದಂತಿದ್ದು,ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಲು ಸರ್ಜರಿ ಆರಂಭಿಸಿದAತಿದೆ.
ಒಟ್ಟಿನಲ್ಲಿ ತಾಲೂಕಿನಲ್ಲಿ ಎಲ್ಲಾ ಕಾರ್ಯಕ್ರಮಗಳು ಸರ್ವರ ಪಾಲ್ಗೊಳ್ಳುವಿಕೆ ಮತ್ತು ಸಹಕಾರ – ಸಹಭಾಗಿತ್ವದೊಂದಿಗೆ ಮತ್ತಷ್ಟು ಅರ್ಥಪೂರ್ಣವಾಗಿ ನಡೆಯಲಿ ಎನ್ನುವುದು ನಮ್ಮ ಆಶಯವಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button