
ಅಂಕೋಲಾ: ದೊಡ್ಡ ದೇವರೆಂದೇ ಪ್ರಸಿದ್ಧಿಯಾಗಿರುವ ಶ್ರೀವೆಂಕಟರಮಣ ದೇವಾಲಯದಲ್ಲಿ ಶ್ರಾವಣ ಮಾಸದ ಮೂರನೇ ಶನಿವಾರದ ಪ್ರಯುಕ್ತ ಶ್ರೀ ವೆಂಕಟರಮಣ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಯುವ ಉದ್ದಿಮೆದಾರ ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಶಿರಗುಂಜಿಯ ಗಣೇಶ ಕೇಶವ ನಾಯಕ (ಪುಟ್ಟು ) ಇವರು ಮತ್ತು ಕುಟುಂಬ ವರ್ಗದವರ ಅನ್ನ ಸಂತರ್ಪಣೆ ಸೇವೆ ನಡೆಸಿಕೊಟ್ಟರು. ನೂಲು ಹುಣ್ಣಿಮೆ ಹಬ್ಬ ಮತ್ತು ರಕ್ಷಾ ಬಂಧನ ಹಬ್ಬ ತಾಲೂಕಿನಾದ್ಯಂತ ಸಡಗರ ಸಂಭ್ರಮಗಳಿಂದ ನಡೆಯುತ್ತಿದ್ದು, ಎಲ್ಲರ ಮನೆಗಳಲ್ಲಿ ಇದು ಸಾಮಾನ್ಯವಾಗಿದೆ.
ಹೀಗಿದ್ದೂ ಶನಿವಾರ ದೊಡ್ಡದೇವರ ಸನ್ನಿಧಿಯಲ್ಲಿ ಹಮ್ಮಿಕೊಂಡ ವಿಶೇಷ ಪೂಜೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀದೇವರ ದರ್ಶನ ಪಡೆದು,ಅನ್ನ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು. ದೇವಸ್ಥಾನ ಆಡಳಿತ ಮಂಡಳಿಯ ಪ್ರಮುಖರಾದ ಮಯೂರ ಆರ್ ನಾಯಕ, ಪುಟ್ಟು ಶಿರಗುಂಜಿ ಅವರ ತಂದೆ ಕೇಶವ ನಾಯಕ,ತಾಯಿ ಸಹೋದರ ಸಹೋದರಿ ಸೇರಿದಂತೆ ,ಕುಟುಂಬ ವರ್ಗದವರು,ಒಂದು ಮಿತ್ರರು ಆಪ್ತರು ಹಾಗೂ ಹಿತೈಷಿಗಳು ಹಾಗೂ ಶ್ರೀದೇವರ ಭಕ್ತವೃಂದ ಮತ್ತು ದೇವಸ್ಥಾನದ ಸಿಬ್ಬಂದಿಗಳು,ಅರ್ಚಕರುಇತರೆ ಪ್ರಮುಖರು ಇತರರಿದ್ದರು,
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ