Join Our

WhatsApp Group
Focus News

ಅಸಮರ್ಪಕ ವಿದ್ಯುತ್ ಪೂರೈಕೆಗೆ ಬೇಸತ್ತ ಸಾರ್ವಜನಿಕರು : ಕಾಡುತ್ತಿದೆ ಬೀದಿ ದೀಪದ ಸಮಸ್ಯೆ

ಹೊನ್ನಾವರ: ತಾಲೂಕಿನ ಹೊಸಪಟ್ಟಣ ಗ್ರಾಮದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಬೀದಿ ದೀಪದ ಸಮಸ್ಯೆಯ ಕುರಿತು ಅಲ್ಲಿನ ಗ್ರಾಮಸ್ಥರು ಸಹಾಯಕ ಕಾರ್ಯನಿರ್ವಾಹಕರಲ್ಲಿ ಮನವಿ ಮಾಡಿದ್ದಾರೆ. ಕಳೆದ ಓಂದು ತಿಂಗಳಿನಿoದ ತಾಲೂಕಿನ ಹೊಸಪಟ್ಟಣ ಗ್ರಾಮದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿದ್ದು, ಈ ಊರಿನ ಮನೆಗಳಿಗೆ ಫೇಸ್ ಮತ್ತು ನ್ಯೂಟ್ರಲ್ ನಲ್ಲಿ ವಿದ್ಯುತ್ ಪೂರೈಕೆಯಾಗುತ್ಥಿದ್ದು, ಹಲವಾರು ಮನೆಗಳಲ್ಲಿ ವಿದ್ಯುತ್ ಉಪಕರಣಗಳು ಹಾಳಾಗಿದೆ. ಇನ್ನೂ ವಿದ್ಯುತ ಪೂರೈಕೆಯು ಸಹ ಸರಿಯಾಗಿ ಆಗುತ್ತಿಲ್ಲ.

ಕೆ.ಇ.ಬಿ ಗೆ ಇಲ್ಲಿನ ಗ್ರಾಮಸ್ಥರು ಪೋನ್ ಕರೆ ಮಾಡಿ ದೂರು ನೀಡಿದರೂ ತಮ್ಮ ಇಲಾಖೆಯಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಅನಾಹುತ ಆಗಿದ್ದಲ್ಲಿ ತಮ್ಮ ಇಲಾಖೆಯೇ ಹೊಣೆಗಾರರಾಗುತ್ತೀರಿ ಎಂದು ಹೊಸಪಟ್ಟಣ ಗ್ರಾಮಸ್ಥರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಮನವಿಯನ್ನ ಕೆ.ಇ.ಬಿ ಇಲಾಖೆ ಅಧಿಕಾರಿ ಶಂಕರ ಗೌಡರವರು ಸ್ವೀಕರಿಸಿದರು. ಇನ್ನೂ ಬೀದಿ ದೀಪಗಳನ್ನು ಸರಿಪಡಿಸುವಂತೆ ಕಾಸರಕೋಡ ಗ್ರಾಮ ಪಂಚಾಯತ ಭೇಟಿ ನೀಡಿ ಮನವಿ ನೀಡಿದರು. ಈ ಸಂದರ್ಭದಲ್ಲಿ ಹೊಸಪಟ್ಟಣದ ಗ್ರಾಮ ಪಂಚಾಯತ ಸದಸ್ಯರು, ಗ್ರಾಮಸ್ಥರು, ಊರಿನ ನಾಗರೀಕರು ಹಾಜರಿದ್ದರು.

ವಿಸ್ಮಯ ನ್ಯೂಸ್ ವಿವೇಕ್ ಶೇಟ್ ಹೊನ್ನಾವರ

Back to top button