ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅವಕಾಶ ಮಾಡಿಕೊಟ್ಟರೆ ನೆತ್ತಿಯ ಮೇಲೆ ಕತ್ತಿ ಕಟ್ಟಿಕೊಂಡು ಇದ್ದಂತೆ: ಬಂಗಾರಮಕ್ಕಿಯ ಧರ್ಮದರ್ಶಿ ಮಾರುತಿ ಗುರೂಜಿ

ಹೊನ್ನಾವರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ನಡೆಯುವ ವಿಚಾರಗೋಷ್ಠಿಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕ್ಷೇತ್ರ ಬಂಗಾರ ಮಕ್ಕಿಯ ಧರ್ಮದರ್ಶಿ ಮಾರುತಿ ಗುರೂಜಿ ಮಾಹಿತಿಯನ್ನು ನೀಡಿದರು.
- ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ
- ಆಗಸ್ಟ್ 24 ರಂದು ವಿಚಾರಗೋಷ್ಠಿ
- ಸುದ್ದಿಗೋಷ್ಠಿ ನಡೆಸಿ ಮಾಹಿತಿ
ಇದೆ ಬರುವ ಆಗಸ್ಟ್ 24 ರಂದು ನಡೆಯುವ ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ನಡೆಯುವ ವಿಚಾರಗೋಷ್ಠಿಯ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಅವರು ಆಣೆಕಟ್ಟಿನಲ್ಲಿ ವಿದ್ಯುತ್ ಉತ್ಪಾದನೆ ಪ್ರಾರಂಭವಾದದಿನದಿoದ ಇಲ್ಲಿಯವರೆಗೆ ಊರಿಗೆ ಆಗಲಿ, ಸುತ್ತಮುತ್ತಲಿನ ಪ್ರದೇಶಕ್ಕೆ ಆಗಲಿ ಯಾವ ಕೊಡುಗೆಯು ಕೆಪಿಸಿಯಿಂದ ಸಿಕ್ಕಿಲ್ಲ. ನಾವು ಅಭಿವೃದ್ಧಿ ವಿರೋಧಿಗಳಲ್ಲ, ಅಭಿವೃದ್ಧಿ ಪರವಾಗಿ ಇದ್ದೇವೆ. ವಿದ್ಯುತ್ ಉತ್ಪಾದನೆಗೆ ಪರ್ಯಾಯ ವ್ಯವಸ್ಥೆ ಇದೆ. ಗುಡ್ಡ ಕೊರೆದು ಭೂಗತವಾಗಿ ಮಾಡುವ ಯೋಜನೆ ಇದು, ಇಂತಹ ಭೂಗತ ಯೋಜನೆಗೆ ಅವಕಾಶ ಮಾಡಿಕೊಟ್ಟರೆ ನೆತ್ತಿಯ ಮೇಲೆ ಕತ್ತಿ ಕಟ್ಟಿಕೊಂಡು ಇದ್ದಂತೆ ಎಂದರು.
ಪ್ರಪoಚದಲ್ಲೇ ಇಲ್ಲದೆ ಸಸ್ಯ ಸಂಕುಲ ಇಲ್ಲಿದೆ
ವೈನಾಡು, ಅಂಕೋಲಾ ಶಿರೂರು, ಕೊಡಲು ಜಿಲ್ಲೆಯಲ್ಲಿ ಗುಡ್ಡ ಕುಸಿತದ ಪರಿಣಾಮ ಎದುರಿಸಿದ್ದೇವೆ. ಯೋಜನೆ ಬೇಕು ಅಂತಾದರೆ, ಯೋಜನೆ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸಿ ಹೇಳಿ ಎಂದರು. ಪ್ರಪಂಚದಲ್ಲೇ ಇಲ್ಲದೆ ಇರುವ ಸಸ್ಯ ಸಂಕುಲ ಇಲ್ಲಿಯ ಅರಣ್ಯದಲ್ಲಿದೆ. ಸರಕಾರವೆ ರಚಿಸಿದ ಕಾನೂನು ಅರಣ್ಯ ಹಕ್ಕು, ವನ್ಯ ಜೀವಿ ಸಂಕುಲ, ಪರಿಸರ ಸಂಸರಕ್ಷಣೆ ಹೀಗೆ ನೀವೇ ಹಾಕಿದ ಬೇಲಿ ನೀವೇ ಮುರಿತ ಇದ್ದಾರೆ ಎಂದರು.
ಯುನೆಸ್ಕೊದಿಂದ ಮಾನ್ಯತೆ ಪಡೆದ ಪಶ್ಚಿಮಘಟ್ಟ ಅರಣ್ಯ ಪ್ರದೇಶ
ಯುನೆಸ್ಕೊದಿಂದ ಮಾನ್ಯತೆ ಪಡೆದ ಪಶ್ಚಿಮಘಟ್ಟ ಅರಣ್ಯ ಪ್ರದೇಶವಾಗಿದೆ. 142 ಹೆಕ್ತೇರ್ ಅರಣ್ಯ ನಾಶ, 1600 ಮರ ಕಡಿಯಲಾಗುತ್ತದೆ. ಈ ಯೋಜನೆಗೆ ಬಳಸುವ ಕೋಟಿ ಕೋಟಿ ಅನುದಾನದಿಂದ ಪರ್ಯಾಯ ವಿದ್ಯುತ್ ಉತ್ಪತ್ತಿ ಮಾಡಬಹುದಾಗಿದೆ. ಸಿಂಗಳಿಕ ಸಮುಚ್ಚಳ, ಹುಲಿ ಸಂರಕ್ಷಣೆ ಪ್ರದೇಶ, ಕಾಳಿಂಗ ಸರ್ಪ ಪ್ರದೇಶದಂತ ಸೂಕ್ಷ್ಮ ಪ್ರದೇಶವಾಗಿದೆ. ಈ ಯೋಜನೆಗೆ 10 ಸಾವಿರ ಕೋಟಿ ಸಾಲ ಹೊರದೇಶದಿಂದ ಪಡೆಯುತ್ತಿದೆ. ಬೆಗೋಡಿ ಗ್ರಾಮದ 130 ಕುಟುಂಬ ಅತಂತ್ರ ವಾಗುವ ಪರಿಸ್ಥಿತಿಯಲ್ಲಿದೆ ಎಂದರು.
ಈ ಎಲ್ಲಾ ವಿಷಯದ ಬಗ್ಗೆ ಚರ್ಚೆ ಮಾಡಲು, ಯೋಜನೆಯ ಅಧ್ಯಯನ ಮಾಡಲು ಅನೇಕ ತಜ್ಞರು, ವಿಜ್ಞಾನಿಗಳು, ಚಿಂತಕರು, ಸಂಸೋದಕರು, ಸಂಘ ಸಂಸ್ಥೆಯವರು ಆಗಮಿಸಿಲಿದ್ದಾರೆ. ಸಾರ್ವಜನಿಕರು ಕೂಡ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗಣೇಶ ಹೆಗಡೆ ಬೊಮ್ಮಾರ ಇದ್ದರು. ಅಜಿತ್ ಕುಮಾರ ಹೆಗಡೆ ಸ್ವಾಗತಿಸಿದರು. ಕಿರಣ ಮಹಾಲೆ ವಂದಿಸಿದರು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ