
- ಪ್ರತಿ ಶೋಧನೆಯ ಹಿಂದೆ ಭಾರತದ ಕೊಡುಗೆ ಇದೆ
- ವಿಶೇಷ ಉಪನ್ಯಾಸ ಕಾರ್ಯಕ್ರಮ
ಕುಮಟಾ: ಸಮೃದ್ಧ ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಪ್ರಪಂಚದ ಪ್ರತಿ ಶೋಧನೆಯ ಹಿಂದೆ ಭಾರತದ ಕೊಡುಗೆ ಇದೆ. ಆದರೆ ಅದರ ಯಶಸ್ಸನ್ನು ಬೇರೆ ದೇಶದವರು ಉಪಯೋಗಿಸಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ ಎಂದು ಖ್ಯಾತ ವಿಜ್ಞಾನಿ ಡಾ.ಅಶೋಕ್ ಪ್ರಭು ನುಡಿದರು.
ಭಾರತದಲ್ಲಿ ಇಂತಹ ಹೊಸ ಶೋಧನೆಗಳಿಗೆ ಭೂಮಿಕೆ ಇಲ್ಲಿಯೇ ಲಭ್ಯವಾದರೆ ಭಾರತ ವಿಜ್ಞಾನ, ಮತ್ತು ತಂತ್ರಜ್ಞಾನ ಶೋಧನೆಯಲ್ಲಿ ಇನ್ನಷ್ಟು ಮೈಲುಗಲ್ಲು ಸ್ಥಾಪಿಸಲು ಸಾಧ್ಯ ಎಂದು ಅವರು ನುಡಿದರು. ಅವರು ಕುಮಟಾದ ಕೆನರಾ ಕಾಲೇಜು ಸೊಸೈಟಿಯ ಡಾ. ಏ . ವಿ ಬಾಳಿಗಾ ಪದವಿ ಪೂರ್ವ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬೇರ್ಪಡಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಭಾರತದಲ್ಲಿ ಶೋಧನೆಗೆ ವಿಫಲ ಅವಕಾಶ
ಭಾರತದಲ್ಲಿ ಶೋಧನೆಗೆ ವಿಫಲ ಅವಕಾಶವಿದೆ ನೀವೆಲ್ಲ ಮುಂದಿನ ದಿನಗಳಲ್ಲಿ ಅದರ ಸದುಪಯೋಗಪಡಿಸಿಕೊಂಡು ಸಾಧಕರಾಗಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶ್ರೀಮತಿ ವೀಣಾ ಕಾಮತ್ ಡಾ. ಅಶೋಕ ಪ್ರಭು ಅವರ
ಅರ್ಥಪೂರ್ಣ ಮಾತುಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಒಳ್ಳೆಯ ಸಾಧಕರಾಗಬೇಕು ಎಂದು ನುಡಿದರು .
ಸಾಂಸ್ಕೃತಿಕ ವಿಭಾಗದ ಸಂಚಾಲಕಿ ಶ್ರೀಮತಿ ಅನುಷಾ ಬಾಡ್ಕ ರ ಸರ್ವರನ್ನು ಸ್ವಾಗತಿಸಿದರು ವೇದಿಕೆ ಮೇಲೆ ಕ್ರೀಡಾ ವಿಭಾಗದ ಉಪಾಧ್ಯಕ್ಷ ಉಪನ್ಯಾಸಕ ಮಹಾಬಲೇಶ್ವರ ಅಂಬಿಗ ಉಪಸಿತರಿದ್ದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಆಸಕ್ತಿಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವಿಸ್ಮಯ ನ್ಯೂಸ್, ಕುಮಟಾ