ಹೊನ್ನಾವರ ತಾಲೂಕಿನಲ್ಲಿ 16 ಪಾಸಿಟಿವ್
ಕುಮಟಾದಲ್ಲಿ ಇಂದು ಏಳು ಕೇಸ್ ದೃಢ
ಹೊನ್ನಾವರ: ತಾಲೂಕಿನಲ್ಲಿ ಇಂದು 16 ಕರೊನಾ ಕೇಸ್ ದಾಖಲಾಗಿದೆ. ಈ ಪೈಕಿ ಪಟ್ಟಣಕ್ಕಿಂತ ಗ್ರಾಮೀಣಭಾಗದಲ್ಲಿಯೆ ಅತಿಹೆಚ್ಚ ಪ್ರಕರಣ ದಾಖಲಾಗಿದೆ, ಮಂಕಿ ವ್ಯಾಪ್ತಿಯಲ್ಲೇ ಆರು ಕೇಸ್ ಪತ್ತೆಯಾಗಿದೆ.
ಉಳಿದಂತೆ ತಲಗೋಡ, ಖರ್ವಾ, ಚಿಕ್ಕನಕೋಡ, ಕುಳಕೋಡ ಭಾಗದಲ್ಲಿ ಸೋಂಕು ದೃಢಪಟ್ಟಿದೆ.
©Copyright reserved by Vismaya tv ಪಟ್ಟಣದ ಕಮಟೆಹಿತ್ಲದ 45 ವರ್ಷದ ಪುರುಷ, ಕೆ ಎಚ್ ಬಿ ಕಾಲೋನಿಯ 28 ವರ್ಷದ ಯುವಕ, ಗ್ರಾಮೀಣ ಭಾಗವಾದ ಮಂಕಿ ಬಣಸಾಲೆಯ 44 ವರ್ಷದ ಪುರುಷ, 58 ವರ್ಷದ ಪುರುಷ, 54 ವರ್ಷದ ಮಹಿಳೆ, 56 ವರ್ಷದ ಮಹಿಳೆ, ನವಾಯತ ಕಾಲೋನಿಯ 31 ವರ್ಷದ ಯುವತಿ, ಮಂಕಿ ಕೋಪ್ಪದಮಕ್ಕಿಯ 45 ವರ್ಷದ ಮಹಿಳೆ, 60 ವರ್ಷದ ಪುರುಷ, 30 ವರ್ಷದ ಯುವಕ, 45 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಚಿಕ್ಕನಕೋಡದ 49 ಪುರುಷ, ಖರ್ವಾದ 38 ವರ್ಷದ ಪುರುಷ, ಕುಳಕೋಡದ 48 ವರ್ಷದ ಪುರುಷ, ತಲಗೋಡಿನ 52 ವರ್ಷದ ಪುರುಷ, ಸೇರಿದಂತೆ ತಾಲೂಕಿನಲ್ಲಿ ಇಂದು 16 ಪ್ರಕರಣ ದಾಖಲಾಗಿದೆ. ಇಂದು 19 ಜನರು ಡಿಸ್ಚಾರ್ಜ್ ಆಗಿದ್ದು, 15 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 95 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಕುಮಟಾದಲ್ಲಿಂದು ಏಳು ಪಾಸಿಟಿವ್:
ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು ಏಳು ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ದಿವಗಿ, ಉಪ್ಪಿನಪಟ್ಟಣ, ಮಿರ್ಜಾನ್, ದೇವರಬಾವಿ, ಗೋಕರ್ಣ ಮುಂತಾದ ಭಾಗಗಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.©Copyright reserved by Vismaya tv
ದಿವಗಿಯ 80 ವರ್ಷದ ವೃದ್ಧೆ, ಉಪ್ಪಿನಪಟ್ಟಣದ 20 ವರ್ಷದ ಯುವತಿ, ಮಿರ್ಜಾನ್‌ನ 17 ವರ್ಷದ ಯುವತಿ, ಮಿರ್ಜಾನ್‌ನ 70 ವರ್ಷದ ವೃದ್ಧೆ, ದೇವರಬಾವಿಯ 47 ವರ್ಷದ ಪುರುಷ, ಗೋಕರ್ಣದ 25 ವರ್ಷದ ಯುವತಿ, ಗೋಕರ್ಣ ಬಂಗ್ಲೆಗುಡ್ಡದ 37 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ಇಂದು ಏಳು ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 987 ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ ಮತ್ತು ಯೋಗೇಶ್ ಮಡಿವಾಳ , ಕುಮಟಾ
ಸೆಲ್ಕೋ ಸೋಲಾರ್ ದೀಪ ಬಳಸಿ, ನಿಮ್ಮ ಮನೆ ಬೆಳಗಿಸಿ
ಸೌರಶಕ್ತಿ ಅಂದರೆ ಕೇವಲ ಬೆಳಕಲ್ಲ
ಅದು ಸ್ವಾವಲಂಬಿ ಬದುಕಿಗೂ ದಾರಿ
ಇದು ಸೆಲ್ಕೋ ಸಂಸ್ಥೆಯ ಗುರಿ
ಸಂಪರ್ಕಿಸಿ: ದತ್ತಾರಾಮ ಭಟ್ಟ, ಮ್ಯಾನೇಜರ್
ಸೆಲ್ಕೋ ಸೋಲಾರ್, ಸನ್ಮಾನ ಹೊಟೇಲ್ ಹತ್ತಿರ
N.H. 66, ಕುಮಟಾ
9880003735/9449360181