Important
Trending

ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ಹರಿದುಬಂದ ಜನಸಾಗರ: 30 ಕ್ವಿಂಟಾಲ್ ನಷ್ಟು ಪಂಚಕಜ್ಜಾಯ ನೈವೇದ್ಯ

ಹೊನ್ನಾವರ: ಗಣೇಶ ಚೌತಿಯ ದಿನದ ಹಿನ್ನಲೆಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ಶ್ರೀ ಕ್ಷೇತ್ರ ಇಡಗುಂಜಿಗೆ ಭೇಟಿ ನೀಡಿ ದರ್ಶನ ಪಡೆದು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಮುಂಜಾನೆ 4 ಗಂಟೆಯಿoದಲೇ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಅರ್ಚಕರಾದ ನರಸಿಂಹ ಭಟ್, ಗಣೇಶ ಚತುರ್ಥಿಯಾಗಿದ್ದರಿಂದ ರಾಜ್ಯದ ಕಡೆಯಿಂದ ಭಕ್ತರು ಗಣಪತಿಗೆ ದರ್ಶನಕ್ಕೆ ಬಂದಿದ್ದಾರೆ. ಇನ್ನೂ 30 ಕ್ವಿಂಟಾಲ್ ನಷ್ಟು ಪಂಚಕಜ್ಜಾಯ ನೈವೆದ್ಯವಾಗಿದೆ. ತೆಂಗಿನಕಾಯಿ,ಬಾಳೆಗೋನೆ ಸಮರ್ಪಣೆ ನಡೆದಿದ್ದು, ಗಣಹೋಮ ನಡೆದಿದೆ. ಭಕ್ತರಿಗೆ ಬೆಳಿಗ್ಗೆ 4 ಗಂಟೆಯಿoದಲೇ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು.

ಸಚಿವರಾದ ಮಂಕಾಳ ವೈದ್ಯ ಮಾತನಾಡಿ ಪ್ರತಿವರ್ಷವು ಸಹ ಶ್ರೀಕ್ಷೇತ್ರಕ್ಕೆ ಬೇಟಿ ನೀಡಿ ಮಹಾಗಣಪತಿಯ ದರ್ಶನ ಪಡೆಯುತ್ತಿದ್ದೇನೆ. ಮಹಾಗಣಪತಿಯು ರಾಜ್ಯದ ಜನರಿಗೆ ಓಳ್ಳೆಯದನ್ನು ಮಾಡಲಿ ಎಂದರು.

40 ಸಾವಿರ ತೆಂಗಿನಕಾಯಿ ಸಮರ್ಪಣೆ

ಇನ್ನೂ ಸರಕಾರಿ ಆಸ್ಪತ್ರೆಯ ವೈದ್ಯರಾದ ರಮೇಶ ಗೌಡ ಮಾತನಾಡಿ ಮಹಾಗಣಪತಿಗೆ ತ್ರಿಕಾಲ ಪೂಜೆ ನಡೆಯುತ್ತದೆ. ಬೇಡಿದ್ದನ್ನು ಕರುಣಿಸುವನಾಗಿದ್ದಾನೆ. ಮಹಾಗಣಪತಿಯ ಸನ್ನಿಧಾನದಲ್ಲಿ ಗಣಹೋಮ, ಪೂಜೆ, ಪುನಸ್ಕಾರ ಹೀಗೆ ವಿವಿಧ ಸೇವೆಗಳು ನಡೆಯುತ್ತವೆ ಎಂದರು.

ಸುಮಾರು 30ಕ್ವಿಂಟಾಲ್ ನಷ್ಟು ಪಂಚಕಜ್ಜಾಯ ನೈವೆದ್ಯವಾಗಿದ್ದು, 40 ಸಾವಿರ ತೆಂಗಿನಕಾಯಿ ಸಮರ್ಪಣೆಯಾಗಿದೆ. 250ಕೂ ಹೆಚ್ಚು ಗಣಹೋಮ ಸತ್ಯಗಣಪತಿ ವೃತ ನಡೆದಿದೆ. ಶ್ರೀ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ ಕಾರಣ ಎರಡು ಕಿಲೋಮೀಟರ್ ವರೆಗೂ ಜನಸಂದಣಿ ಉಂಟಾಯಿತು. ವರುಣ ಅಬ್ಬರಿಸಿದ್ದರಿಂದ ಕೆಲಕಾಲ ಭಕ್ತಾಧಿಗಳು ಮಳೆಯಲ್ಲಿ ನೆನೆಯುವಂತಾಯಿತು. ಸರತಿ ಸಾಲಿನ ಪ್ರಕಾರ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಪೊಲೀಸರು ಪರಿಸ್ಥಿತಿ ನಿಬಾಯಿಸುವಲ್ಲಿ ಹರಸಾಹಸಪಟ್ಟರು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button