Important
Trending

ಕುಮಟಾ ಸಾರ್ವಜನಿಕ ಗಣೇಶೋತ್ಸವ 2025

ಭಕ್ತರ ಮನ ಸೆಳೆಯುತ್ತಿದೆ ಗಣೇಶ ಮೂರ್ತಿ

ಕುಮಟಾ: ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಗೌರಿ-ಗಣೇಶ ಹಬ್ಬವನ್ನು ಸಡಗರ-ಸಂಭ್ರಮದಿoದ ಆಚರಿಸಲಾಗುತ್ತಿದೆ. ಕುಮಟಾ ಪಟ್ಟಣದಲ್ಲಿ ವಿವಿದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಈ ಭಾರಿ ಗಣೇಶೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಧಾರ್ಮಿಕ ವಿಧಿ ವಿಧಾನದಂತೆ ಆಚರಿಸುತ್ತಿದ್ದು, ತಾಲೂಕಿನ ವಿವಿದೆಡೆಯಿಂದ ನೂರಾರು ಸಂಖ್ಯೆಯಲ್ಲಿ ಸಾರ್ವಜಿಕರು ಆಗಮಿಸಿ ಪ್ರಥಮ ಪೂಜಿತನ ದರ್ಶನ ಪಡೆದು ಕೃತಾರ್ಥರಾಗುತ್ತಿದ್ದಾರೆ.

ಕುಮಟಾ ಪಟ್ಟಣದ ಪ್ರಮುಖ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಲ್ಲಿ ಒಂದಾದ ಗುಡಿಗಾರಗಲ್ಲಿ ಗಣೇಶೋತ್ಸವ ಸಮಿತಿಯವರು ಈ ಭಾರಿ 49ನೇ ವರ್ಷದ ಗಣೇಶೋತ್ಸವವನ್ನು ಸರ್ಕಾರದ ಸುತ್ತೋಲೆಯಂತೆ 10 ದಿನಗಳ ಪರ್ಯಂತ ಅತ್ಯಂತ ಅದ್ದೂರಿಯಾಗಿ ಆಚರಿಸುತ್ತಿದ್ದು, ಬೆಳ್ಳಿ ಕಿರೀಟ ಸಮರ್ಪಣೆಯೊಂದಿಗೆ, ಪೂಜಾ ಮೂರ್ತಿಗೆ ಬೆಳ್ಳಿಯ ಕವಚವನ್ನ ಸಮರ್ಪಿಸಲಾಗಿದ್ದು, ಪ್ರತಿಷ್ಥಾಪಿಸಲಾದ ವಿಶೇಷ ಗಣೇಶ ಮೂರ್ತಿಯು ಎಲ್ಲರ ಗಮನ ಸೆಳೆಯುತ್ತಿದೆ.

ಈ ಕುರಿತು ಸಮಿತಿ ಸದಸ್ಯರಾದ ಮಂಜುನಾಥ ಭರತ್ ಅವರು ಮಾತನಾಡಿ, 49ನೇ ವರ್ಷದ ಗಣೇಶೋತ್ಸವವವನ್ನು ಅತ್ಯಂತ ವಿಜೃಂಭಣೆಯಿoದ ಆಚರಿಸಿಕೊಂಡು ಬರುತ್ತಿದ್ದೇವೆ. ಅಗಸ್ಟ್ 27 ರಂದು ಶ್ರೀ ಗಣೇಶನ್ನು ಪ್ರತಿಸ್ಟಾಪಿಸಲ್ಪಟ್ಟು ಸಪ್ಟಂಬರ್ 5ರ ವರೆಗೆ ಪೂಜಿಸಲ್ಪಟ್ಟು ನಂತರ ಶ್ರೀ ಮಂಗಲ ಮೂರ್ತಿಯ ವಿಸರ್ಜನೆ ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 3 ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಮಿತಿಯ ಅದ್ಯಕ್ಷರಾದ ಲಷ್ಮಣ ಎಂ ನಾಯ್ಕ, ಬೆಳ್ಳಿ ಸಮಿತಿಯ ಅದ್ಯಕ್ಷ ವಸಂತ ನಾಯ್ಕ, ಉಪಾದ್ಯಕ್ಷ ನಾಗಪ್ಪ ಭಂಡಾರಿ, ಕಾರ್ಯದರ್ಶಿ ಗುರುನಾಥ ವಕ್ನಳ್ಳಿ, ಖಜಾಂಜಿ ಕರುಣಾಕರ ಭಂಡಾರಿ ಸೇರಿದಂತೆ ಸಮಿತಿಯವರು ಹಾಜರಿದ್ದರು.

ಅದೇ ರೀತಿ ಕುಮಟಾ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಯಿಂದ ಪ್ರತಿ ವರ್ಷದಂತೆ ಈ ವರ್ಷವು ಗಣಪತಿ ಪ್ರತಿಷ್ಟಾಪಿಸಲಾಗಿದ್ದು, ಪ್ರ‍್ರತಿಷ್ಠಾಪಿಸಲಾದ ಗಣೇಶ ಮೂರ್ತಿಯು ಎಲ್ಲರ ಗಮನ ಸೆಳೆಯುತ್ತಿದೆ. ತಾಲೂಕಿನೆಲ್ಲೆಡೆಯಿಂದ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಆಗಮಿಸಿ ವಿಘ್ನ ನಾಶಕನ ಆಶಿರ್ವಾದವನ್ನು ಪಡೆದು, ಪ್ರಸಾದ ಸ್ವೀಕರಿಸಿ ಪುನೀತರಾಗುತ್ತಿದ್ದಾರೆ. ಶುಕ್ರವಾರ ಶ್ರೀ ಸತ್ಯ ಗಣಪತಿ ಪೂಜೆ ಮತ್ತು ಗಣಹೋಮ ನಡೆಯಲಿದ್ದು ಮದ್ಯಾಹ್ನ ಮಹಾ ಅನ್ನ ಸಂತರ್ಪಣೆ ನಡೆಯಲಿದೆ.

ರವಿವಾರ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಅತಿಥಿ ಕಲಾವಿದರಿಂದ ಪಾಪಣ್ಣ ವಿಜಯ-ಗುಣಸುಂದರಿ ಎಂಬ ಯಕ್ಷಗಾನ ಆಖ್ಯಾನ ನಡೆಯಲಿದೆ. ದಿ 31 ರಂದು ವಿಶೇಷ ಮೆರವಣಿಗೆಯಲ್ಲಿ ಶ್ರೀ ಮಂಗಲ ಮೂರ್ತಿಯ ವಿಸರ್ಜನೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖೈಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯವರು ವಿನಂತಿಸಿದ್ದಾರೆ.

ವಿಸ್ಮಯ ನ್ಯೂಸ್, ಸುಜಯ್ ಹೆಗಡೆ, ಕುಮಟಾ

Back to top button