Important
Trending

ಗಮನಸೆಳೆಯುತ್ತಿದೆ ವಿಶ್ವ ಹಿಂದುಪರಿಷತ್ತಿನ ಸಾರ್ವಜನಿಕ ಗಣೇಶೋತ್ಸವ

ಹೊನ್ನಾವರ: ತಾಲೂಕಿನ ಸಾರ್ವಜನಿಕ ಗಣೇಶೋತ್ಸವವನ್ನು ಸಡಗರ ಸಂಭ್ರಮದಿoದ ಗಣೇಶೊತ್ಸವ ಆಚರಿಸಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಪಟ್ಟಣ ಹಾಗು ಗ್ರಾಮೀಣ ಭಾಗದಲ್ಲಿ ಅದ್ದೂರಿಯಾಗಿ ಸಾರ್ವಜನಿಕವಾಗಿ ಗಣೇಶೊತ್ಸವ ಆಚರಿಸುತ್ತಿದ್ದಾರೆ. ಮಳೆಯ ಅಬ್ಬರದ ನಡುವೆಯೂ ಗಣೇಶ ಚತುರ್ಥಿ ಆಚರಣೆ ಸಂಭ್ರಮದಿoದಲೆ ನಡೆಯುತ್ತಿದೆ.

ಹೊನ್ನಾವರದಲ್ಲಿ ಸಡಗರ-ಸಂಭ್ರಮದಿಂದ ಸಾರ್ವಜನಿಕ ಗಣೇಶೋತ್ಸವ

ಮಳೆಯ ಅಬ್ಬರಕ್ಕೆ ಮೋಡ ಕವಿದು ಕತ್ತಲು ಆವರಿಸುವಷ್ಟರ ಮಟ್ಟಿಗೆ ಮಳೆ ಸುರಿದಿದೆ. ಸುರಿಯುವ ಮಳೆಯ ನಡುವೆ ವಿಘ್ನ ನಿವಾರಕನನ್ನು ಮನೆ, ಸಾರ್ವಜನಿಕ ಸೇರಿ ಪೂಜಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರಾದ ವಿಶ್ವನಾಥ ನಾಯಕ ಗಣೇಶೋತ್ಸವ ಸಂಭ್ರಮವನ್ನು ಪೋ.ವೀಣಾಕರ ಇವರ ಮಾರ್ಗದರ್ಶನದಲ್ಲಿ 57 ವರ್ಷಗಳಿಂದ ವಿಜೃಂಭಣೆಯಿoದ ನಡೆಸಿಕೊಂಡು ಬರುತ್ತಿದ್ದೇವೆ. ಈ ಗಣಪತಿಗೆ ಯಾವುದೇ ರಾಸಾಯನಿಕ ಬಳಸುತ್ತಿಲ್ಲ. ಪಟಾಕಿಗಳನ್ನು ಬಳಕೆಯಿಲ್ಲ. ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದರು.

ಮಳೆಯ ಅಬ್ಬರದ ನಡುವೆಯೂ ಗಣಪತಿ ಆರಾಧನೆ

ಇನ್ನೂ ಸಾರ್ವಜನಿಕವಾಗಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಗಣೇಶ ಚತುರ್ಥಿ ಪ್ರಮುಖವಾದುದು. ಸಂಘಟನೆಗಳ ನೇತೃತ್ವದಲ್ಲಿ ನಡೆಯುವ ಈ ಉತ್ಸವದಲ್ಲಿ ಜಾತಿ, ಮತ ಭೇದವಿಲ್ಲದೆ ಎಲ್ಲರೂ ಪಾಲ್ಗೊಳ್ಳುತ್ತಾರೆ. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿ, ಬಳಿಕ ಶೋಭಾಯಾತ್ರೆಯಲ್ಲಿ ವಿಸರ್ಜನೆ ಮಾಡುವುದು ಸಂಪ್ರದಾಯ.

ಕೇಣಿ ಬದಲು ಬೆಲೇಕೇರಿಯಲ್ಲಿ ಬಂದರು ನಿರ್ಮಿಸಿ ಎಂದ ರೂಪಾಲಿ ನಾಯ್ಕ ಹೇಳಿಕೆಗೆ ಸ್ಥಳೀಯ ಮೀನುಗಾರ ಪ್ರಮುಖರಿಂದ ಖಂಡನೆ

ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮನರಂಜನೆಗೆ ವೇದಿಕೆಯನ್ನು ಈ ಹಬ್ಬದ ಸಮಯದಲ್ಲಿ ಕಲ್ಪಿಸಲಾಗುತ್ತಿದೆ. ಸಡಗರ ಸಂಭ್ರಮದಿoದ ಗಣೇಶೊತ್ಸವ ಆಚರಿಸಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಪಟ್ಟಣ ಹಾಗು ಗ್ರಾಮೀಣ ಭಾಗದಲ್ಲಿ ಅದ್ದೂರಿಯಾಗಿ ಸಾರ್ವಜನಿಕವಾಗಿ ಗಣೇಶೊತ್ಸವ ಆಚರಿಸಿರುವುದು ವಿಶೇಷವಾಗಿದೆ. ಈ ಸಂದರ್ಭದಲ್ಲಿ ಗಣಪತಿ ಕಾಮತ, ರಾಕೇಶ ಶೇಟ, ಮುಖೇಶ ಶೇಟ, ವರುಣ ನಾಯಕ, ವಿಶ್ವನಾಥ ನಾಯಕ, ವಿಜು ಕಾಮತ, ಸಂಜು ಶೇಟ ಹಾಜರಿದ್ದರು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button